Advertisement

ಯುವ ಜನಾಂಗದಲ್ಲಿ ಕುಸಿಯುತ್ತಿದೆ ಧಾರ್ಮಿಕ ಮೌಲ್ಯ: ರಂಭಾಪುರಿ ಶ್ರೀ

03:33 PM Feb 22, 2021 | Team Udayavani |

ಕಲಬುರಗಿ: ಆಧುನಿಕ ಯುಗದಲ್ಲಿ ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಧಾರ್ಮಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ಬಾಳೆಹೊನ್ನೂರು ರಂಭಾಪುರಿ
ಶ್ರೀ ಡಾ| ವೀರಸೋಮೇಶ್ವರ ಜಗದ್ಗುರು ಕಳವಳ ವ್ಯಕ್ತಪಡಿಸಿದರು. ತಾಲೂಕಿನ ಬಬಲಾದ (ಎಸ್‌) ಗ್ರಾಮದ ಶ್ರೀಮದ್‌ ರಂಭಾಪುರಿ ಖಾಸಾ ಶಾಖಾ ಬೃಹನ್ಮಠದ ಅ ಧಿಕಾರ ಹಸ್ತಾಂತರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ಧರ್ಮ ಸಂಸ್ಕೃತಿ ಮತ್ತು ಪರಂಪರೆ ಮೌಲ್ಯಗಳ ಬಗ್ಗೆ ನಿರ್ಲಕ್ಷé ಮನೋಭಾವ ಬೆಳೆಯುತ್ತಿರುವ ದಿನಗಳಲ್ಲಿ ಧರ್ಮ ಸಂರಕ್ಷಣೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಪುನರುತ್ಥಾನಗೊಳಿಸುವ ಜವಾಬ್ದಾರಿ ಮಠಗಳ ಮೇಲಿದೆ ಎಂದು ಹೇಳಿದರು.

ದೇಶಕ್ಕೊಂದು ಸಂವಿಧಾನ ಇರುವಂತೆ ಧರ್ಮಕ್ಕೊಂದು ಧರ್ಮ ಸಂವಿಧಾನವಿದೆ. ವೀರಶೈವ ಧರ್ಮದಲ್ಲಿ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸಸ್ಥಲಗಳು ಮೂಲವಾಗಿವೆ. ಇವುಗಳ ಅರಿವು ಮತ್ತು ಆಚರಣೆ ಬಹಳ ಮುಖ್ಯ. ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಮುಖ್ಯವೆಂದು ವೀರಶೈವ ಧರ್ಮ ಸಾರಿದೆ ಎಂದು ನುಡಿದರು.

ಹಿಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯಿಂದ ತೆರವಾದ ಪೀಠಾಧಿಪತಿ ಸ್ಥಾನಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ನಿಯುಕ್ತಿಗೊಳಿಸಿ ಅಧಿಕಾರ ಹಸ್ತಾಂತರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೂತನ ಶ್ರೀಗಳು ಧಾರ್ಮಿಕ ಜಾಗೃತಿ ಜೊತೆಗೆ ಸಾಮಾಜಿಕ ಚಿಂತನೆ ಹೊಂದಿ, ಮಠದ ಅಭಿವೃದ್ಧಿಗೊಳಿಸುವರೆಂಬ ವಿಶ್ವಾಸ ತಮಗಿದೆ ಎಂದು ರೇಶ್ಮೆ ಮಡಿ, ಸ್ಮರಣಿಕೆ ನೀಡಿ ಶುಭ ಹಾರೈಸಿ, ದಂಡ- ಕಮಂಡಲ, ಪಂಚಮುದ್ರಾ ನೀಡಿ ಆಶೀರ್ವದಿಸಿದರು. ನೂತನ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಹಿಂದಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಠದ ದಾಖಲೆ ಪತ್ರ ಹಸ್ತಾಂತರಿಸಿದರು.

ಚಿನ್ಮಯಗಿರಿ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯರು, ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು, ಪಡಸಾವಳಿ ಡಾ| ಶಂಭುಲಿಂಗ
ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಡಾ| ರೇವಣಸಿದ್ಧ ಶಿವಾಚಾರ್ಯರು, ರಾಜೇಶ್ವರ ಘನಲಿಂಗ ರುದ್ರಮುನಿ ಶಿವಾಚಾರ್ಯರು, ದೋರನಹಳ್ಳಿ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ದಂಡಗುಂಡ ಸಂಗನಬಸವ ಶಿವಾಚಾರ್ಯರು, ನವಲಕಲ್ಲ ಸೋಮನಾಥ ಶಿವಾಚಾರ್ಯರು, ಮಹಾರಾಷ್ಟ್ರದ ಜವಳಿ ವಿರಕ್ತಮಠದ ಗಂಗಾಧರ ಶ್ರೀ, ಅಣದೂರಿನ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡು ನೂತನ ಶ್ರೀಗಳಿಗೆ ಶುಭ ಹಾರೈಸಿದರು.

Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಶಾಸಕ ರಾಜುಗೌಡ (ನರಸಿಂಹ ನಾಯಕ), ಯಾದಗಿರಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಕಲಬುರಗಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಡಾ| ಸುರೇಶ ಸಜ್ಜನ, ಬೆಂಗಳೂರಿನ ಡಾ| ದಯಾನಂದ ಎಸ್‌. ಪಟ್ಟಣಶೆಟ್ಟಿ, ಉದ್ಯಮಿ ಸತೀಶ ವ್ಹಿ. ಗುತ್ತೇದಾರ, ಕೃಷ್ಣಾಜೀ ಕುಲಕರ್ಣಿ, ಕರಿಸಿದ್ಧಪ್ಪ ಪಾಟೀಲ ಹರಸೂರ, ಶಿವಶರಣಪ್ಪ ಸಾಹು ಸೀರಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next