Advertisement
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಸ್ಪತ್ರೆಯ 4ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಡಯಾಲಿಸಿಸ್ ಘಟಕ ಇದೆ. ನಾಗಮಾರಪಳ್ಳಿ ಆಸ್ಪತ್ರೆಯಲ್ಲೂ ಈ ಘಟಕ ಆರಂಭಿಸಲಿರುವುದರಿಂದ ಮೂತ್ರಪಿಂಡ ಸಮಸ್ಯೆ ಇರುವ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಿ, ಬೇರೆ ನಗರಗಳಿಗೆ ಹೋಗುವುದು ತಪ್ಪಲಿದೆ ಎಂದರು.
Related Articles
Advertisement
ಆಸ್ಪತ್ರೆಯಲ್ಲಿ 16 ವೈದ್ಯರು ಸೇರಿ 100 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಯೂ ಸೇವೆ ಇದೆ. ವಿಶೇಷ ನಿಗಾ ಘಟಕ, ಮಕ್ಕಳ ನಿಗಾ ಘಟಕ, 2 ವಿಶೇಷ ವೆಂಟಿಲೇಟೆಡ್ ಆಂಬ್ಯೂಲೆನ್ಸ್ ಸೇರಿ 3 ಆಂಬ್ಯೂಲೆನ್ಸ್‌ಗಳು ಇವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಆಸ್ಪತ್ರೆ ಜನಸ್ನೆಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆ ಜಾರಿಗೆ ತಂದಿರುವ 2000 ರೂ. ವೆಚ್ಚದಲ್ಲಿ ಸಾಮಾನ್ಯ ಹೆರಿಗೆ ಮತ್ತು 10,000 ರೂ. ವೆಚ್ಚದಲ್ಲಿ ಸಿಸೆರಿಯನ್ ಯೋಜನೆ ಜಿಲ್ಲೆಯ ಜನರಿಗೆ ವರದಾನ ವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಿ.ಕೆ. ಸಿದ್ರಾಮ, ಚಂದ್ರಕಾಂತ ಗುದಗೆ, ಕಾಶಪ್ಪಾ ಧನ್ನೂರ, ವಿಜಯಕುಮಾರ ಕೋಟೆ, ಭೀಮರಾವ್ ಪಾಟೀಲ್, ರಾಮರಾವ್ ಬಿರಾದರ, ಸುನೀಲ ಪಾಟೀಲ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ರಾಮದಾಸ ತುಳಸಿರಾಮ, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ಹುಗಾರ, ಡಾ| ರಜನೀಶ ವಾಲಿ, ಸೈಯದ ಖೀಜರುಲ್ಲಾ, ಉದಯಭಾನು ಹಲವಾಯಿ, ಎಚ್.ಎಸ್. ಮಾರ್ಟಿನ್, ಸಿಇಒ ಎನ್. ಕೃಷ್ಣಾರೆಡ್ಡಿ ಇದ್ದರು.