Advertisement

ಮಾತುಕತೆ ಕುರಿತ ನಿರ್ಧಾರ ನೇಪಾಲಕ್ಕೆ ಬಿಟ್ಟದ್ದು: ಕೇಂದ್ರ

09:51 AM Jun 16, 2020 | mahesh |

ಹೊಸದಿಲ್ಲಿ: ಭಾರತದ ಭೂಪ್ರದೇಶಗಳನ್ನು ಸೇರಿಸಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳವು ಬಿಡುಗಡೆ ಗೊಳಿಸಿರುವುದು ರಾಜಕೀಯ ಲಾಭವನ್ನು ಪಡೆಯುವ ದುರುದ್ದೇಶದಿಂದ. ಹಾಗಾಗಿ, ಭಾರತ ಮತ್ತು ನೇಪಾಲದ ನಡುವೆ ಮಾತುಕತೆಯ ವಾತಾವರಣವನ್ನು ಸೃಷ್ಟಿಸುವುದು ನೇಪಾಲ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೊಣೆಗಾರಿಕೆಯಾಗಿದೆ ಎಂಬುದು ಭಾರತ‌ದ ನಿಲುವು ಎಂದು ಮೂಲಗಳು ಹೇಳಿವೆ.

Advertisement

ಸತ್ಯಶೋಧನೆ ಅಥವಾ ಪುರಾವೆಗಳೇ ಇಲ್ಲದೆ ಹೊಸ ನಕ್ಷೆ ರಚಿಸಲಾಗಿದೆ. ಇದು ಭಾರತದೊಂದಿಗಿನ ಗಡಿ ವಿವಾದಕ್ಕೆ ರಾಜಕೀಯ ಬಣ್ಣ ನೀಡುವ ಸಂಚಾಗಿದ್ದು, ದಶಕಗಳಿಂದಲೂ ಇರುವಂಥ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸುವಲ್ಲಿ ನೇಪಾಲ ಗಂಭೀರವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮಾತುಕತೆಯ ಪ್ರಸ್ತಾವಕ್ಕೆ ಭಾರತ ಯಾವತ್ತೂ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next