Advertisement
ಎಲ್ಲರಿಗೂ ಭೌತಿಕ ತರಗತಿ ನಡೆಸಲು ಅನುಮತಿ ಸಿಗುವ ವರೆಗೆ ಆನ್‌ಲೈನ್ ತರಗತಿಗಳನ್ನೇ ಮುಂದುವರಿಸಲು ಕೆಲವು ಖಾಸಗಿ ಶಾಲಾಡಳಿತ ಮಂಡಳಿ ತೀರ್ಮಾನಿಸಿವೆ. ಮತ್ತೆ ಕೆಲವು ಶಾಲೆಗಳು ವಿದ್ಯಾರ್ಥಿಗಳ ಪೋಷಕರ ಆಶಯದಂತೆ ಭೌತಿಕ ತರಗತಿ ಅಥವಾ ಆನ್‌ಲೈನ್ ತರಗತಿ ನಡೆಸಲು ಮುಂದಾಗಿವೆ.
Related Articles
Advertisement
ಏಕಕಾಲದಲ್ಲಿ ಆನ್‌ಲೈನ್ ಮತ್ತು ಭೌತಿಕ ತರಗತಿಗಳನ್ನು ನಡೆಸುವುದು ಕಷ್ಟ. ಹೀಗಾಗಿ ಶಾಲೆಗಳೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿವೆ. ಸಂಘಟನೆಯಿಂದ ಯಾವುದೇ ಸೂಚನೆ ನೀಡಿಲ್ಲ ಎಂದು ಸಿಬಿಎಸ್‌ಇ ಶಾಲಾಡಳಿತ ಮಂಡಳಿಗಳ ಸಂಘದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸನ್ ಹೇಳಿದ್ದಾರೆ.
ಸಂವೇದ ತರಗತಿ ಯಥಾಸ್ಥಿತಿ :
ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭವಾಗಿದ್ದರೂ, ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದ ತರಗತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸ್ಪಷ್ಟಪಡಿಸಿದೆ.
ಭೌತಿಕ ತರಗತಿಗಳಿಗಾಗಿ ಪ್ರತ್ಯೇಕ ಗುಂಪುಗಳನ್ನು ಶಾಲಾ ಹಂತದಲ್ಲಿ ರಚನೆ ಮಾಡಲಾಗಿದೆ. ಸೋಮವಾರ, ಮಂಗಳವಾರ ಹಾಗೂ ಬುಧವಾರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಗುರುವಾರ, ಶುಕ್ರವಾರ ಹಾಗೂ ಶನಿವಾರ ಆನ್‌ಲೈನ್ ತರಗತಿ ಇರುತ್ತದೆ. ಹಾಗೆಯೇ ಸೋಮವಾರದಿಂದ ಬುಧವಾರ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವವರಿಗೆ ಗುರುವಾರದಿಂದ ಶನಿವಾರದ ವರೆಗೆ ಭೌತಿಕ ತರಗತಿ ಇರುತ್ತದೆ. ಆನ್‌ಲೈನ್ ತರಗತಿಯವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಂವೇದ ತರಗತಿ ಮುಂದುವರಿ ಯಲಿದೆ. ವೇಳಾಪಟ್ಟಿಯಲ್ಲೂ ಬದಲಾವಣೆ ಇಲ್ಲ. ಸಂವೇದ ತರಗತಿಗಳ ಪಾಠವನ್ನು ಯೂ-ಟ್ಯೂಬ್ ಚಾನೆಲ್‌ಗಳಲ್ಲೂ ಅಪ್‌ಲೋಡ್ ಮಾಡಲಿದ್ದೇವೆ ಎಂದು ಡಿಇಎಸ್‌ಇಆರ್‌ಟಿ ನಿರ್ದೇಶಕ ಎಂ. ಆರ್. ಮಾರುತಿ ತಿಳಿಸಿದರು.