Advertisement

ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಕುರಿಗಳ ಸಾವು

04:11 PM Aug 10, 2019 | Suhan S |

ಶಿರಹಟ್ಟಿ: ತಾಲೂಕಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಕುರಿ ಹಾಗೂ ಮೇಕೆಗಳು ಸಾಲು ಸಾಲಾಗಿ ಸಾಯುತ್ತಿವೆ.

Advertisement

ತಾಲೂಕಿನ ದೇವಿಹಾಳ ಗ್ರಾಮದ ಹತ್ತಿರ ಹಾನಗಲ್ ತಾಲೂಕಿನ ಮಹರಾಜಪೇಟೆ ಗ್ರಾಮದ ಬೀರಪ್ಪ ವೀಟ್ಟಪ್ಪ ಎಂಬ ಕುರಿಗಾಹಿಯ ಐದು ಕುರಿಗಳು ಶುಕ್ರವಾರ ಮೃತಪಟ್ಟಿವೆ. ಸ್ಥಳಕ್ಕೆ ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣನವರ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣನವರ ಮಾತನಾಡಿ, ತಾಲೂಕಿನಾದ್ಯಂತ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. ಆದ್ದರಿಂದ ಕುರಿಗಾಹಿಗಳು ತಮ್ಮ ಜೀವನದ ಜೊತೆಗೆ ಕುರಿಗಳ ರಕ್ಷಣೆಗೆ ಮುಂದಾಗಬೇಕು. ಬಯಲು ಪ್ರದೇಶದಲ್ಲಿ ಬಿಡಾರ ಹುಡದೆ ಮನೆ, ಗೋದಾಮು ಸೇರಿದಂತೆ ಬೆಚ್ಚಗಿನ ಜಾಗದಲ್ಲಿ ಬಿಡಾರ ಹಾಕಬೇಕು. ಇಲ್ಲದಿದ್ದರೆ ಮಳೆ ಹಾಗೂ ಗಾಳಿಯ ರಭಸದಿಂದ ಇನ್ನಷ್ಟು ಕುರಿಗಳಿಗೆ ಸೇಡು ಹತ್ತಿ ಹಸುನಿಗಬಹುದು. ಆದ್ದರಿಂದ ಕುರಿಗಾಹಿಗಳು ಕುರಿಗಳ ರಕ್ಷಣೆಗೆ ಮುಜಾಗೃತ ಕ್ರಮ ಕೈಗೊಳ್ಳಬೇಕು. ಸತ್ತ ಕುರಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಶು ವೈದ್ಯಾಧಿಕಾರಿ ನಿಂಗಪ್ಪ ಓಲೇಕಾರ, ಕಂದಾಯ ನಿರೀಕ್ಷಕ ಎಸ್‌.ಎಸ್‌. ಮಗದುಂ ಸೇರಿದಂತೆ ಕುರಿಗಾಯಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next