Advertisement
ಕಾಸರಗೋಡು ಜಿಲ್ಲೆಯಲ್ಲಿ 120ಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಕೇರಳದ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಇದರ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬ್ರೆಜಿಲ್‌ನಲ್ಲಿ ಬೆಕ್ಕು, ಸಿಂಗಾಪುರದಲ್ಲಿ ನಾಯಿಗಳಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಬೆಕ್ಕುಗಳಿಗೂ ಸೋಂಕು ತಗಲಿರಬಹುದೇ ಎಂಬ ಆತಂಕ ವ್ಯಕ್ತವಾಗಿದೆ. ಹೀಗಾಗಿ ಅವುಗಳ ಪ್ರಮುಖ ಅಂಗಾಂಗಗಳನ್ನು ತಿರುವನಂತಪುರದಲ್ಲಿರುವ ಪ್ರಾಣಿ ರೋಗ ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದೆ.
ತಿರುವನಂತಪುರದ ಪ್ರಾಣಿ ರೋಗ ಪತ್ತೆ ಕೇಂದ್ರದಿಂದ ಸ್ಪಷ್ಟ ಫಲಿತಾಂಶ ಸಿಗದೆ ಇದ್ದರೆ ಹೆಚ್ಚಿನ ಪರೀಕ್ಷೆಗಾಗಿ ಭೋಪಾಲದಲ್ಲಿರುವ ರಾಷ್ಟ್ರೀಯ ಹೈ ಸೆಕ್ಯೂರಿಟಿ ಆ್ಯನಿಮಲ್ ಡಿಸೀಸಸ್ ಪ್ರಯೋಗಾಲಯಕ್ಕೆ ಕಳುಹಿಸ ಲಾಗುತ್ತದೆ ಎಂದು ಕಾಸರಗೋಡಿನ ಪ್ರಾಣಿ ಜನ್ಯ ಕಾಯಿಲೆಗಳ ನಿರ್ಮೂಲನ ಯೋಜನೆಯ ಸಂಚಾಲಕ ಡಾ| ಟಿಟೋ ಜೋಸೆಫ್ ಹೇಳಿದ್ದಾರೆ.
Related Articles
ಜಿಲ್ಲಾಸ್ಪತ್ರೆಯ ಕೋವಿಡ್ 19 ವಾರ್ಡ್‌ನಲ್ಲಿ ಬೆಕ್ಕುಗಳು ಓಡಾಡುತ್ತಿದ್ದ ಬಗ್ಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಅವು ಗಲೀಜು ಮಾಡುತ್ತಿವೆ ಎಂದೂ ದೂರಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಶು ಸಂಗೋಪನ ಇಲಾಖೆಯ ಉಸ್ತುವಾರಿಯಲ್ಲಿ ಅವುಗಳನ್ನು ಸೆರೆ ಹಿಡಿಯಲಾಗಿತ್ತು. ಅನಂತರ ಅವುಗಳನ್ನು ಗೂಡಿನಲ್ಲಿಟ್ಟು ಆಹಾರ ಒದಗಿಸಲಾಗುತ್ತಿತ್ತು ಎಂದು ಜಿಲ್ಲಾ ಪಶುಸಂಗೋಪನ ಅಧಿಕಾರಿ ಡಾ| ಉಣ್ಣಿಕೃಷ್ಣನ್ ತಿಳಿಸಿದ್ದಾರೆ.
Advertisement
ಈ ಬೆಕ್ಕುಗಳನ್ನು ಹಿಡಿದವರು ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ ಅನ್ನು ಧರಿಸಿದ್ದರು ಎಂದು ಡಾ| ಟಿಟೋ ಜೋಸೆಫ್ ಹೇಳಿದ್ದಾರೆ.