Advertisement

ಜೋಡುಪಾಲ: ಗುಡ್ಡ ಜರಿದು ವ್ಯಕ್ತಿ ಸಾವು, ಹಲವರು ನಾಪತ್ತೆ 

12:20 PM Aug 18, 2018 | |

ಸಂಪಾಜೆ : ಸಂಪಾಜೆ – ಮಡಿಕೇರಿ ಮಧ್ಯದ ಜೋಡುಪಾಲದಲ್ಲಿ ಗುಡ್ಡ ಜರಿದು ಮೂರು ಮನೆಗಳು ನಾಶವಾಗಿವೆ. ಹಲವರು ಮಣ್ಣಿನಡಿ ಸಿಲುಕಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ. ಮಹಿಳೆ ಹಾಗೂ 4 ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುರುವಾರವೇ ಗುಡ್ಡ ಜರಿಯಲು ಆರಂಭವಾಗಿದ್ದು, ಕೆಲವರನ್ನು ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಪೂರ್ವಾಹ್ನ ಗುಡ್ಡ ಜರಿದು, ಮೂರು ಮನೆ ಗಳೂ ಕುಸಿ ದಿವೆ. ಮಣ್ಣಿ ನಡಿ ಬಸಪ್ಪ ಅವರ ಮೃತ ದೇಹ ಪತ್ತೆಯಾಗಿದೆ. ಅವರ ಪತ್ನಿ, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ.

Advertisement

2ನೇ ಮೆಣ್ಣಂಗೇರಿ ಮತ್ತು ಜೋಡುಪಾಲ ಪರಿಸರದ 600 ಜನರನ್ನು ಸ್ಥಳಾಂತರಿಸಲಾಗಿದೆ. ಜೋಡುಪಾಲ ಶಾಲೆಯಲ್ಲಿ 100 ಜನ ಆಶ್ರಯ ಪಡೆದಿದ್ದಾರೆ. ಹಗ್ಗದ ಸಹಾಯದಿಂದ 60 ಜನರನ್ನು ಕರೆತರಲಾಗಿದೆ. ಇನ್ನೂ 100ಕ್ಕೂ ಅಧಿಕ ಜನರ ರಕ್ಷಣೆಗೆ ಮಳೆ ಹಾಗೂ ಪ್ರವಾಹದ ನೀರು ಅಡ್ಡಿಯಾಗಿದೆ. ಈ ಪ್ರದೇಶ ಮಡಿಕೇರಿ ತಾಲೂಕಿಗೆ ಒಳಪಟ್ಟಿದ್ದರೂ ಅಲ್ಲಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ರಸ್ತೆ ಯಲ್ಲಿ ರಭಸದಿಂದ ನೀರು ಹರಿದು ಬರುತ್ತಿದ್ದು, 3 ಕಿ.ಮೀ. ದೂರಕ್ಕೆ ಸಂಚಾರ ಸಾಧ್ಯವಾಗುತ್ತಿಲ್ಲ. ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಎಸ್‌.ಐ. ಮಂಜುನಾಥ್‌ ಹಾಗೂ ಇತರರು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next