ಕೊಪ್ಪಳ: ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧವೇ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇನೆ.
ಸರ್ಕಾರ ಸಮಿತಿ ರಚನೆ ಮಾಡಿ ವರದಿ ಕೇಳುತ್ತಿದೆ. ಸಮಿತಿ ವರದಿ ನೀಡಬೇಕಿದೆ. ಸರ್ಕಾರಕ್ಕೆ ನಾವು ಗಡುವು ನೀಡಿದ್ದು, ಒಂದು ವೇಳೆ ಮೀಸಲಾತಿ ಹೆಚ್ಚಳ ಮಾಡದಿದ್ದರೆ ಮತ್ತೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ರಮೇಶ ಜಾರಕಿಹೊಳಿ ಅವರಿಗೆ ಜಲ ಸಂಪನ್ಮೂಲ ಇಲಾಖೆ ನೀಡಿದ್ದಾರೆ. ಅವರಿಗೆ ಆ ಖಾತೆ ನಿಭಾಯಿಸುವುದು ಕಷ್ಟ ಅನ್ನಿಸಬಹುದು. ಇಲ್ಲಿ ಭಾಷೆ ಸಮಸ್ಯೆಯಿದೆ. ಕಾನೂನಾತ್ಮಕ ಸಮಸ್ಯೆ ಇರುತ್ತದೆ. ಅದೆಲ್ಲವನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗಬಹುದು. ರಮೇಶ ರಾಜಕಿಹೊಳಿಯವರು ರಾಜೀನಾಮೆ ನೀಡುವ ಮಾತನ್ನಾಡಿ ಬ್ಲಾಕ್‌ವೆುಲ್ ಮಾಡುತ್ತಿದ್ದಾರೆ. ಈ ರೀತಿ ಬ್ಲಾಕ್‌ವೆುಲ್ ಮಾಡುವುದು ಸರಿಯಲ್ಲ.
-ಸತೀಶ ಜಾರಕಿಹೊಳಿ, ಮಾಜಿ ಸಚಿವ