Advertisement

Perla ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಕೆರೆಯಲ್ಲಿ ಪತ್ತೆ

12:35 AM Nov 09, 2023 | Team Udayavani |

ಪೆರ್ಲ: ನಾಪತ್ತೆಯಾಗಿದ್ದ ಬಿ.ಎಡ್‌. ವಿದ್ಯಾರ್ಥಿ ಎಣ್ಮಕಜೆ ಪಂಚಾಯತ್‌ ವ್ಯಾಪ್ತಿಯ ಪದ್ಯಾಣ ನಿವಾಸಿ ಸಿಲ್ವಸ್ಟರ್‌ ಕ್ರಾಸ್ತಾ ಅವರ ಪುತ್ರ ಐವನ್‌ ಕ್ರಾಸ್ತಾ (25) ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

Advertisement

ತೊಕ್ಕೊಟ್ಟುವಿನ ಬಿ.ಎಡ್‌. ಕೇಂದ್ರವೊಂದರ ವಿದ್ಯಾರ್ಥಿಯಾಗಿರುವ ಐವನ್‌ ಕ್ರಾಸ್ತಾ ಸೋಮವಾರ ಕಾಲೇಜಿಗೆ ಹೋಗಿ ಮರಳಿ ಬಂದು ಮಲಗಿದ್ದರು. ನ. 7ರಂದು ಬೆಳಗ್ಗೆ ಮನೆಯವರು ನೋಡಿದಾಗ ಐವನ್‌ ಕ್ರಾಸ್ತಾ ಕಾಣಲಿಲ್ಲ. ಕಾಲೇಜಿಗೆ ಹೋಗಿರಬಹುದೆಂದು ಭಾವಿಸಿದ ಮನೆಯವರು ಸಂಜೆಯಾದರೂ ಮರಳದ ಹಿನ್ನೆಲೆಯಲ್ಲಿ ಹುಡುಕಾಡುತ್ತಿದ್ದಾಗ ಮೃತದೇಹ ಕೆರೆಯಲ್ಲಿ ಪತ್ತೆಯಾಯಿತು.

ಕಾಸರಗೋಡಿನ ಅಗ್ನಿಶಾಮಕ ದಳದ ಸಿಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ತನ್ನ ಸಾವಿಗೆ ತಾನೇ ಹೊಣೆಗಾರನೆಂದು ಬರೆಯಲಾದ ಪತ್ರವೊಂದು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next