Advertisement

Dr n d souza; ಓದುಗರ ಸಂಖ್ಯೆ ಜಾಸ್ತಿಯಾಗೋ ದಿನಗಳು ಮತ್ತೆ ಬರಲಿವೆ

05:06 PM Jan 28, 2024 | Team Udayavani |

ಸಾಗರದಲ್ಲಿದ್ದುಕೊಂಡೇ ಸಾಗರದಾಚೆಯ ಬದುಕನ್ನು ಸಮರ್ಥವಾಗಿ ಬಿಂಬಿಸಿದ ಹಿರಿಯ ಸಾಹಿತಿ ನಾ. ಡಿಸೋಜ ಅವರಿಗೆ ತಡವಾಗಿಯಾದರೂ ಈ ಸಲ ಪಂಪ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಉದಯವಾಣಿ ಸಾಪ್ತಾಹಿಕ ಸಂಪದದ ಜತೆ ಆಪ್ತ ಮಾತುಕತೆ.

Advertisement

ಪ್ರತಿಷ್ಠಿತ ಪಂಪ ಪ್ರಶಸ್ತಿ ನಿಮಗೆ ಬಂದಿದೆ. ಈ ಸಮಯದಲ್ಲಿ ನಿಮಗೇನನ್ನಿಸುತ್ತದೆ?
ಪಂಪ ಕನ್ನಡದ ಆದಿಕವಿ. ಕನ್ನಡದ ಮೇಲೆ ಅತ್ಯಂತ ಪ್ರೀತಿಯನ್ನಿಟ್ಟುಕೊಂಡು ಬರೆ ದವನು. ಆ ಪ್ರಶಸ್ತಿ ನನಗೆ ಬಂದಿರುವುದು ಅತ್ಯಂತ ಸಂತಸ ವನ್ನುಂಟುಮಾಡಿದೆ.

ಕೆಲ ವರ್ಷಗಳ ಹಿಂದೆ ದೃಶ್ಯ ಮಾಧ್ಯಮ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಈಗ ಓದಿನ ಹವ್ಯಾಸ ಕಡಿಮೆ ಆಗಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಿಜ. ಅದು ನನ್ನ ಅನುಭವಕ್ಕೂ ಬಂದಿದೆ. ನನ್ನ ಕಾದಂಬರಿ ಗಳನ್ನು ಓದಿ ಬರುತ್ತಿದ್ದ ಅಭಿಪ್ರಾಯಗಳ ಸಂಖ್ಯೆ ಕಡಿಮೆಯಾಗಿದೆ. ಪ್ರಕಾಶ ಕರೂ ಸಹಾ ಅದನ್ನೇ ಹೇಳುತ್ತಿದ್ದಾ ರೆ. ಟಿವಿ, ಮೊಬೈಲುಗಳಲ್ಲೇ ಈಗ ಬಹಳ ಸುಲಭವಾಗಿ ಮಾಹಿತಿ ಸಿಗ್ತಿರೋದ್ರಿಂದ ಪುಸ್ತಕಗಳ ಬಗ್ಗೆ ನಾವು ಗಮನ ಹರಿಸ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಟೇಪ್‌ ರೆಕಾರ್ಡರ್‌ ಮೊದಲಿಗೆ ಬಂದಾಗಲೂ ಹೀಗೇ ಆಯ್ತು. ಆದರೆ ಅನಂತರದಲ್ಲಿ ಓದುಗರು ಪುಸ್ತಕದ ಕಡೆಗೆ ಮರಳಿದರು. ಕಾರಣ ಓದುಗ ಯಾವತ್ತಿದ್ದರೂ ಓದುಗನೇ. ಅವನಿಗೆ ಓದಿನಲ್ಲಿ ಸಿಗುವ ಸಂತೋಷ ಇನ್ನೆಲ್ಲೂ ಸಿಗುವುದಿಲ್ಲ. ಓದುಗರ ಸಂಖ್ಯೆ ಜಾಸ್ತಿಯಾಗೋ ದಿನಗಳು ಮತ್ತೆ ಬರಲಿವೆ. ಅದು ನನ್ನ ಹಾರೈ ಕೆಯೂ ಹೌದು, ನಂಬಿಕೆಯೂ ಹೌದು.

ಬಹಳಷ್ಟು ಕಾದಂಬರಿಗಳನ್ನು ಬರೆದು ಓದುಗರನ್ನು ತಲುಪಿದವರು ನೀವು. ಇಂದಿನ ಬರಹಗಾರರಿಗೆ ಏನು ಹೇಳ್ಳೋದಕ್ಕೆ ಇಷ್ಟ ಪಡ್ತೀರಾ?
ದಯವಿಟ್ಟು ಹೆಚ್ಚು ಓದಿ. ಲೇಖಕ ಯಾವ ವಿಷಯದ ಬಗ್ಗೆ ಹೇಳುವುದಕ್ಕೆ ಹೊರಟಿದ್ದಾರೆ ಅನ್ನುವುದನ್ನ ಅರ್ಥ ಮಾಡಿಕೊಳ್ಳಿ. ಒಂದು ಕೃತಿ ಕೇವಲ ಕೃತಿ ಮಾತ್ರ ಅಲ್ಲ, ಅದೊಂದು ಅನುಭವವೂ ಆಗುವ ರೀತಿಯಲ್ಲಿ ಓದುವುದನ್ನು ಬೆಳೆಸಿಕೊಳ್ಳ ಬೇಕು. ಒಬ್ಬ ಒಳ್ಳೆಯ ಓದುಗ ಮಾತ್ರ ಒಂದೊಳ್ಳೆ ಕಾದಂಬರಿ ಬರೆಯಲಿಕ್ಕೆ ಸಾಧ್ಯ.

ಲೇಖಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಬರೆದವರು ನೀವು. ಈ ಹೊತ್ತಿನ ತರುಣ ಪೀಳಿಗೆಯ ಜನರಿಗೆ ನೀವು ಏನನ್ನ ಹೇಳ್ಳೋದಕ್ಕೆ ಬಯಸುತ್ತೀರಿ?
ಸಾಹಿತ್ಯದಿಂದ ನಮಗೆ ಒಳ್ಳೆಯದಾಗುತ್ತೆ, ಸಾಹಿತ್ಯದಿಂದ ನಾವು ಪ್ರೌಢ ರಾಗ್ತೀವೆ ಅನ್ನೋ ಐಡಿಯಾಲಜಿಯನ್ನಿ ಟ್ಕೊಂಡು ಸಾಹಿತ್ಯ ರಚಿಸುವವರಿಗೆ ಹೆಚ್ಚು ಬೆಲೆ ಕೊಡುವವನು ನಾನು. ಸಾಹಿತ್ಯ ಕೇವಲ ಕಾಲ ಕಳೆಯೋ ದಕ್ಕೋ ಅಥವಾ ಮನೋರಂಜನೆಗೋ ಅಲ್ಲ ಅನ್ನುವುದು ನನ್ನ ನಂಬಿಕೆ. ಸಂಗೀತ ಅಥವಾ ಇನ್ಯಾವುದೇ ಕಲೆಯ ಹಾಗೆ ಸಾಹಿತ್ಯ ಸಹಾ ನಮ್ಮ ವ್ಯಕ್ತಿತ್ವವನ್ನು ಬದಲಾಯಿ ಸಬೇಕು. ಇದೊಂದು ಆದರ್ಶವೂ ಹೌದು, ಉದ್ದೇ ಶವೂ ಹೌದು. ಓದು ಅಂದರೆ ಬರಿದೆ ಓದಲ್ಲ. ಹಾಗಾಗಿ ಏನನ್ನೇ ಬರೆಯು ವಾಗಲೂ ನಾನು’ ಇದು ಎಲ್ಲಿಗೆ ಮುಟ್ಟುತ್ತದೆ?’ ಎಂದು ಯೋಚಿಸುತ್ತೇನೆ. ಈ ನಿಟ್ಟಿನಲ್ಲೇ ನಮ್ಮ ಲೇಖಕರು ಸಾಗಬೇಕು ಅನ್ನೋದು ನನ್ನ ಸಲಹೆ.

Advertisement

ಸಂದರ್ಶನ: ವಿನಾಯಕ ಅರಳಸುರಳಿ

Advertisement

Udayavani is now on Telegram. Click here to join our channel and stay updated with the latest news.

Next