Advertisement

ಇಳಿಯದು ಡೇಟಾ ಬಿಲ್‌

06:00 AM Mar 18, 2018 | Team Udayavani |

ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ, ಆರು ತಿಂಗಳಿಂದ ತಮ್ಮ ಡೇಟಾ ಬಿಲ್‌ಗ‌ಳಲ್ಲಿ ಸುಮಾರು ಶೇ. 30ರಿಂದ 40ರಷ್ಟು ಕಡಿತ ಕಾಣುತ್ತಿದ್ದ ಅಂತರ್ಜಾಲ ಬಳಕೆದಾರರು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಲ್‌ ಕಡಿತವಾಗುತ್ತದೆ ಎಂದು ಭಾವಿಸಿದ್ದರೆ ಅದು ಸುಳ್ಳು. ಹೀಗೆಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಜಿಯೋ ಕಂಪನಿಯು ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ನಂತರ, ದೇಶದ ಎಲ್ಲಾ ಡೇಟಾ ಸೇವಾ ಕಂಪನಿಗಳ ನಡುವೆ ದರ ಸಮರ ಭುಗಿಲೆದ್ದಿತ್ತು. ಅದರ ಪರಿಣಾಮವಾಗಿ, ಗ್ರಾಹಕರು  ಮೊಬೈಲ್‌ ಬಿಲ್‌ಗ‌ಳಲ್ಲಿ ಭಾರೀ ಕಡಿತ ಕಾಣುವಂತಾಗಿತ್ತು. ಅದರಲ್ಲೂ ಕಳೆದ ಆರು ತಿಂಗಳಿಂದ ಮತ್ತಷ್ಟು ಇಳಿಕೆಯಾಗಿತ್ತು. ಕಳೆದ ವರ್ಷದ ಆರಂಭದಲ್ಲಿ ಒಂದು ಜಿ.ಬಿ. ಡೇಟಾಕ್ಕೆ ನೀಡಬೇಕಿದ್ದ 21 ರೂ.ಗಳಲ್ಲಿಯೂ ಶೇ. 10ರಷ್ಟು ಇಳಿಕೆಯಾಗಿತ್ತು.  

ಆದರೆ, ಇನ್ನು ಮುಂದೆ ಈಗ ಆಗಿರುವ ಇಳಿಕೆಗಿಂತ ಹೆಚ್ಚು ಇಳಿಕೆ ಆಗುವುದಿಲ್ಲ ಎಂದು ಅಮೆರಿಕದ ಮದ್ಯವರ್ತಿ ಸಂಸ್ಥೆಯಾದ ಜೆಫೆರೀಸ್‌ ಹಾಗೂ ಇನ್ನಿತರ ಮಾರುಕಟ್ಟೆ ತಜ್ಞರ ಅನಿಸಿಕೆಗಳನ್ನು ಉಲ್ಲೇಖೀಸಿ ವರದಿ ನೀಡಲಾ ಗಿದೆ. ದರ ಸಮರದಲ್ಲಿ ಏರ್‌ಟೆಲ್‌, ವೊಡಾ ಫೋನ್‌, ಐಡಿಯಾ ಸೇರಿದಂತೆ ಪ್ರಮುಖ ಕಂಪನಿಗಳು ಒಟ್ಟಾರೆಯಾಗಿ ಸುಮಾರು 61 ಸಾವಿರ ಕೋಟಿ ರೂ. ಕಳೆದುಕೊಂಡಿವೆ. ಹಾಗಾಗಿ, ಇನ್ನು ಮುಂದೆ, ಈಗಿರುವ ಟಾರಿಫ್ ಪ್ಲಾನ್‌ಗಳಲ್ಲೇ ಡೇಟಾ ಸೇವೆ ನೀಡಲು ನಿರ್ಧರಿಸಿರುವ ಕಂಪನಿಗಳು, ಗ್ರಾಹಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹೆಚ್ಚು ಡೇಟಾ, ಹೆಚ್ಚು ಮನರಂಜನಾ ಆಯ್ಕೆಗಳಂಥ ಸೇವೆ ನೀಡಲು ಮುಂದಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next