Advertisement

ಭಕ್ತರ ಮನದ ಕತ್ತಲೆ ಕಳೆದ ಶಿವಕುಮಾರ ಶ್ರೀ

09:20 AM Feb 12, 2019 | Team Udayavani |

ಬೀದರ: ಅದ್ವೈತ ಸಾರ್ವಭೌಮ ಚಕ್ರವರ್ತಿ ಶ್ರೀ ಸಿದ್ಧಾರೂಢರ ಜೀವನ ಸಂದೇಶವನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಶ್ರೀ ಶಿವಕುಮಾರ ಮಹಾ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ನುಡಿದರು.

Advertisement

ನಗರದ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಮಹಾಸ್ವಾಮೀಜಿ ಅವರ ಜಯಂತಿ ಅಮೃತ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಿನನಿತ್ಯ ಅಧ್ಯಯನ, ಅಧ್ಯಾಪನದಲ್ಲಿ ಜೀವನ ಕಳೆದ ಶ್ರೀಗಳು ಭಕ್ತರ ಹೃಯದ ಕತ್ತಲೆಯನ್ನು ಕಳೆಯುವ ಕಾರ್ಯ ಮಾಡಿದ್ದಾರೆ. ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಿ ಜನ ಮಾನಸದಲ್ಲಿ ಉಳಿದಿದ್ದಾರೆ. ಈ ಸಾಧನೆಯ ಸ್ಮರಣಾರ್ಥ ಶಿವಕುಮಾರ ಸ್ವಾಮಿಗಳ ಅಮೃತ ಮಹೋತ್ಸವ ನಡೆದಿದೆ ಎಂದರು.

ಮಹಾಲಿಂಗಪುರದ ಶ್ರೀ ಸಹಜಾನಂದ ಸ್ವಾಮೀಜಿ ಮಾತನಾಡಿ, ಬೀದರ ಜಿಲ್ಲೆಯ ಚಳಕಾಪುರವನ್ನು ಸುಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಶಿವಕುಮಾರ ಮಹಾ ಸ್ವಾಮಿಗಳಿಗೆ ಸಲ್ಲುತ್ತದೆ. ಅಂದಿನ ಗುಂಪಾ ಇಂದು ಅಧ್ಯಾತ್ಮದ ಅರಮನೆಯಾಗಿದೆ ಎಂದರು.

ಕಲಬುರಗಿಯ ಮಾತಾಶ್ರೀ ಲಕ್ಷ್ಮೀ ದೇವಿ ಮಾತನಾಡಿ, ಈ ಜಗತ್ತಿಗೆ ಮೂಲರೂಪ ಪರಮಾತ್ಮ. ಅವನನ್ನು ಮರೆಯುತ್ತಿರುವ ಕಾರಣ ದುಃಖ ದುಮ್ಮಾನ ಬೆನ್ನುಹತ್ತಿವೆ. ಈ ಕುರಿತು ಅರಿಯುವುದು ಅತೀ ಅವಶ್ಯಕವಾಗಿದೆ. ಹಾಂಗಂತ ಇದು ಅಷ್ಟು ಸುಲಭದ ಕಾರ್ಯವಲ್ಲ. ಸದ್ಗುರುವಿನ ಪಾದಕ್ಕೆ ಶರಣು ಹೊಗಬೇಕು ಎಂದ ಅವರು, ಶಿವಕುಮಾರ ಮಹಾ ಸ್ವಾಮಿಗಳು 75 ವರ್ಷ ಸಾರ್ಥಕ ಜೀವನ ನಡೆಸಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

Advertisement

ಅಕ್ಕಲಕೊಟದ ಶರಣ ಮಠದ ಶ್ರೀ ಚಿಕ್ಕರೇವಣ ಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಅಹಂ ಇದ್ದಲ್ಲಿ ಪರಮಾತ್ಮನಿಗೆ ನಮಸ್ಕಾರ ಮುಟ್ಟುವುದಿಲ್ಲ. ಪರಿಶುದ್ಧ ಭಾವವಿದ್ದಲ್ಲಿ ಪರಮಾತ್ಮನಿದ್ದಾನೆ. ಅಹಂ ಕಳೆದಾಗಲೇ ಜೀವನ್ಮುಕ್ತಿ. ಶ್ರೀ ಸಿದ್ಧಾರೂಢ ಮಠದಲ್ಲಿ ಜ್ಞಾನದ ಕುಂಭಮೇಳವೇ ಆಯೋಜನೆಗೊಂಡಿದೆ. ಇದರಲ್ಲಿ ಪಾಲ್ಗೊಂಡವರೆಲ್ಲ ಧನ್ಯರು ಎಂದರು.

ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮಿಗಳು ಮಾತನಾಡಿ, ಅಜ್ಞಾನದ ಕತ್ತಲೆ ಆವರಿಸಿದ ಕಾರಣ ದೇವರನ್ನು ಕಾಣಲು ಸಾಧ್ಯವಿಲ್ಲ. ನತ್ತು ಮಾಡಿದವರನ್ನು ನೆನೆಯುತ್ತಾರೆ. ಮೂಗು ಮಾಡಿದವರನ್ನು ಮರೆತರೆಯುವುದು ಸಾಮಾನ್ಯ. ಜಗತ್ತಿನ ಮೂಲವಾದ ಪರಮಾತ್ಮನನ್ನು ಮರೆತರೆ ನಮಸ್ಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಶಿವಕುಮಾರ ಮಹಾ ಸ್ವಾಮಿಗಳು 75 ವರ್ಷ ಸಾರ್ಥಕ ಬದುಕು ನಡೆಸಿದ್ದಾರೆ. ಕಾಡಾಗಿದ್ದ ಈ ಪ್ರದೇಶವನ್ನು ನಾಡಾಗಿಸಿದ್ದಾರೆ ಎಂದರು.

ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಉಪಕಾರ ಪಡೆದ ಬಳಿಕ ಪ್ರತ್ಯುಪಕಾರ ಮಾಡಲೆಬೇಕು. ಇದು ನಮ್ಮ ಭಾರತಿಯ ಸಂಸ್ಕೃತಿ. ಅನಂತ ಉಪಕಾರ ಕರುಣಿಸಿದ ಪರಮಾತ್ಮನನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಕಾಣುವ ಸುಗಂಧದ ಹೂ ಅರಳಲು ಕಾಣದ ಬೇರಿಗೆ ನೀರು ಹಾಕಿದರೆ ಪಲ್ಲವಿಸುವುದು. ಅನಂತ ಶಕ್ತಿಯಿಂದ ಕೂಡಿದ ಪರಮಾತ್ಮ ಯಾವ ಶಕ್ತಿಯಿಂದಲೂ ಅನುಗ್ರಹಿಸಬಹುದು. ಪ್ರತಿಯೊಬ್ಬರು ಗುರುವಿನಲ್ಲಿ ಶಿವನನ್ನು ಕಾಣಬೇಕು ಎಂದರು.

ಸಾಧುಸಂಸ್ಥಾನ ಮಠ ಇಂಚಲದ ಡಾ| ಶಿವಾನಂದ ಭಾರತಿ ಮಹಾ ಸ್ವಾಮಿಗಳು, ನಿರುಪಾದೇಶ್ವರ ಮಹಾ ಸ್ವಾಮಿಗಳು, ಸ್ವರೂಪಾನಂದ ಮಹಾ ಸ್ವಾಮಿಗಳು, ಇಂಡಿ ನಿಜಗುಣ ದೇವರು ಹುಣಶ್ಯಾಳ, ಗಣೇಶಾನಂದ, ಪರಮಾನಂದ ಸ್ವಾಮಿಗಳು, ಶ್ರದ್ಧಾನಂದ ಸ್ವಾಮಿಗಳು, ಮಾತಾ ಸಿದ್ದೇಶ್ವರಿ ತಾಯಿ, ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಬಸವಕಲ್ಯಾಣ, ಮಾತಾಶ್ರೀ ಶೋಭಾತಾಯಿ ನಾಗಪುರ, ಮನಿಷಾತಾಯಿ, ಮಾತಾ ಸಂಗೀತಾದೇವಿ, ಶ್ರೀ ಶಂಕರಾನಂದ ಸ್ವಾಮಿಗಳು, ಶ್ರೀ ಲಕ್ಷ್ಮಣಾನಂದ ಸ್ವಾಮಿಗಳು ಯರ್ಗಲ್‌, ಶ್ರೀ ರಾಜಮಲ್ಲಯ್ಯ ಸ್ವಾಮಿಗಳು, ದಯಾನಂದ ಸ್ವಾಮಿಗಳು, ಶರಣಾನಂದ ಸ್ವಾಮಿಗಳು, ಡಾ| ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶಟಕಾರ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಕರಬಸಪ್ಪ ಮುಸ್ತಾಪುರೆ, ಸುಭಾಶ ಪಾಟೀಲ ಮುಚಳಂಬ, ಈಶ್ವರಗೌಡ ಕಮಡಳ್ಳಿ, ಉದಯ ಭಾನು ಹಲವಾಯಿ, ಸದ್ಭಕ್ತರಾದ ಸಹಜಾನಂದ ಕಂದಗುಳ, ಡಾ|ಹಾವಗಿರಾವ್‌ ಮೈಲಾರೆ, ಮಡಿವಾಳಪ್ಪ ಗಂಗಶೆಟ್ಟಿ, ಅಮರನಾಥ ಕಣಜಿ, ಕಲ್ಯಾಣರಾವ್‌ ಬುಜುರ್ಕೆ, ರಾಜೇಂದ್ರ ರುದ್ರವಾಡಿ, ಸುನೀಲಕುಮಾರ ಮಾಮಡಿ, ಮಚ್ಚಂದ್ರನಾಥ ಮುಲಗೆ, ಶಂಕರರಾವ್‌, ಶ್ರೀನಾಥ ಮಸ್ಕಲೆ, ಪ್ರಭು ಬೆಣ್ಣೆ ಸೇರಿದಂತೆ ಅಪರಾ ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next