Advertisement
ಗ್ರಾಮೀಣ ಪ್ರದೇಶದ ಕ್ರಾಂತಿಕ್ಷೀರೋದ್ಯಮದ ಕ್ರಾಂತಿ ನಡೆದಿರುವುದು ಗ್ರಾಮೀಣ ಪ್ರದೇಶದಿಂದ. ಒಂದು ಅಂದಾಜಿನ ಪ್ರಕಾರ ಪ್ರಸ್ತುತ ಹೈನುಗಾರಿಕೆಯಿಂದ ವಿಶ್ವದಲ್ಲೆಡೆ ನೂರು ಕೋಟಿ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಭಾರತದ ಹೆಚ್ಚಿನ ಕಡೆ ಹಾಲು ಸೊಸೈಟಿಗಳು ಇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳನ್ನು ಕ್ಷೀರ ಕ್ರಾಂತಿ ತಲುಪಿದೆ. ಹೆಚ್ಚಿನ ಕಡೆ ಗ್ರಾಮಕ್ಕೊಂದು ಸೊಸೈಟಿಗಳಿವೆ. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಜೀವಾಳವೇ ಆಗಿದೆ. ಹಲವಾರು ಸೊಸೈಟಿಗಳು ಹೈನುಗಾರರಿಗೆ ಅತ್ಯುತ್ತಮ ಸೌಕರ್ಯಗಳನ್ನು ನೀಡುತ್ತಿರುವುದು ಕೂಡ ಶ್ಲಾಘನೀಯವೇ ಆಗಿದೆ.
ಮೊದಲ ಬಾರಿಗೆ 2001ರಲ್ಲಿ ವಿಶ್ವ ಹಾಲು ದಿನ ಆಚರಣೆ ಕುರಿತು ಆದೇಶ ಹೊರಡಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 1ರಂದು ವಿಶ್ವ ಹಾಲು ದಿನ ಆಚರಿಸಲಾಗುತ್ತಿದ್ದು, ಹಾಲಿನ ಮಹತ್ವದ ಕುರಿತು ಪ್ರಚುರಪಡಿಸಲಾಗುತ್ತಿದೆ. ಇದೇ ದಿನ ಕ್ಷೀರೋದ್ಯಮದ ಸಾಧಕರನ್ನು ಗೌರವಿಸುವ ಕಾರ್ಯವೂ ನಡೆಯುತ್ತಿದೆ. ಉತ್ತಮ ಉಪಕಸುಬು
ಕೆಲವರು ಹೈನುಗಾರಿಕೆಯನ್ನು ಉದ್ಯಮವಾಗಿ ನಡೆಸುತ್ತಿದ್ದರೆ, ಗ್ರಾಮೀಣ ಭಾಗದ ಹೆಚ್ಚಿನ ಕಡೆ ಇದೊಂದು ಉತ್ತಮ ಉಪಕಸುಬು. ಕೃಷಿ ಸಹಿತ ಇತರ ಕಾರ್ಯದೊಂದಿಗೆ ಅದಕ್ಕೆ ಪೂರಕವಾಗಿ ಹೈನುಗಾರಿಕೆ ನಡೆಸುವವರು ಬಹಳಷ್ಟು ಜನರಿದ್ದಾರೆ.
Related Articles
ಹಲ್ಲು ಮತ್ತು ಮೂಳೆಗಳ ಬಲವರ್ಧನೆಗೆ, ಚೈತನ್ಯಕ್ಕೆ, ನರಗಳ ಕಾರ್ಯಕ್ಕೆ, ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿಗೆ, ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಶುದ್ಧ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ, ಎಲ್ಲ ವಯಸ್ಸಿನವರ ದೇಹದ ಆರೋಗ್ಯಕ್ಕೆ ಹಾಲು ಮತ್ತು ಅದರ ಉತ್ಪನ್ನಗಳು ಸಹಕಾರಿ ಆಗಿವೆ. ಈ ಎಲ್ಲ ಅಂಶಗಳನ್ನು ಹಾಲು ದಿನಾಚರಣೆಯಲ್ಲಿ ಮನದಟ್ಟು ಮಾಡಿಕೊಡಲಾಗುತ್ತದೆ.
Advertisement