Advertisement

ಸಂಸ್ಕೃತಿ ಉಳಿಸುವ ಕಾರ್ಯ ನಿರಂತರವಾಗಿರಲಿ

06:17 PM Feb 28, 2018 | Team Udayavani |

ಸಂಡೂರು: ಗ್ರಾಮೀಣ ಪ್ರದೇಶದ ಜೀವನದ ಸೊಬಗು ಮತ್ತು ಸಂಸ್ಕೃತಿ ಉಳಿಸುವಂತಹ ಮಹತ್ತರ ಕಾರ್ಯ ನಿರಂತರವಾಗಿರಬೇಕು ಎಂದು ಕೇಶವಮೂರ್ತಿ ಎಲ್‌. ಹೇಳಿದರು.

Advertisement

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ, ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಎಂ.ತುಂಬರಗುದ್ದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಸೇವಾ ಕಾರ್ಯ ಶಿಬಿರದಲ್ಲಿ ಅವರು ಮಾತನಾಡಿದರು. ಅರಣ್ಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ನಾಳಿನ ಪೀಳಿಗೆಗೆ ಅರಣ್ಯ ಉಳಿಸಬೇಕು. ದಿನೇ ದಿನೇ ಪರಿಸರ
ನಾಶವಾಗುತ್ತಿದೆ. ಅದರ ಬಗ್ಗೆ ಸರ್ಕಾರ ಕಾನೂನು ತಂದಿದೆ. ಅದರೆ ಸಾಮಾಜಿಕ ಪ್ರಜ್ಞೆ ಅವಶ್ಯವಾಗಿದೆ. ಯುವಕರು ಅದರ ಬಗ್ಗೆ ಅರಿವು ಮೂಡಿಸಿಕೊಂಡಾಗ ಅರಣ್ಯದ ರಕ್ಷಣೆ, ಪರಿಸರದ ಸ್ವಚ್ಛತೆ ಕಾಪಾಡುವ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಉತ್ತಮವಾಗಿಸಲು ಸಾಧ್ಯವಾಗುತ್ತದೆ ಎಂದರು.

 ಪಶುವೈದ್ಯ ಡಾ| ನಿಂಗಪ್ಪ ಮಾತನಾಡಿ, ಗ್ರಾಮದ ಪ್ರತಿ ಮನೆಯಲ್ಲಿ ಇರುವ ಆಕಳು, ಎತ್ತು, ಕುರಿ, ಮೇಕೆಗಳ ತಪಾಸಣೆ ಮಾಡುವ ಕಾರ್ಯ ಮಾಡಲಾಗಿದೆ. ಅವುಗಳ ರಕ್ಷಣೆ ಮತ್ತು ನಿರ್ವಹಣೆಯಿಂದಲೂ ಸಹ ಅರ್ಥಿಕ ಅಭಿವೃದ್ದಿಯಾಗಲು ಸಾಧ್ಯ ಎಂದರು.
ಶಿಬಿರದ ನಿರ್ದೇಶಕ ಸುಮಾ.ಕೆ.ಜಿ., ಅಧ್ಯಕ್ಷತೆ ವಹಿಸಿದ್ದ ಡಾ| ಪವಿತ್ರಾ ಆಲೂರು, ಲಕ್ಷ್ಮಣ ತೋಳಿ, ಬಿ.ಜಿ. ಮಲ್ಲಪ್ಪ, ಏರಿಸ್ವಾಮಿ ವಿ.,
 ಗ್ರಾಪಂ ಅದ್ಯಕ್ಷ ಹೊನ್ನುರಸ್ವಾಮಿ, ಗ್ರಾಪಂ. ಸದ್ಯಸರಾದ ಉಮೇಶ, ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ನಾಗರತ್ಮಮ್ಮ, ಶಿಕ್ಷಕ ಪಾಂಡುರಂಗ, ರವಿಕುಮಾರ, ಚಿದಾನಂದಪ್ಪ, ಅಂಜಿನಮ್ಮ, ದೇವಪ್ಪ ಇದ್ದರು. ಶಿಬಿರಾರ್ಥಿಗಳಾದ ಇಮಾಮಾಬಾಷ
ಸ್ವಾಗತಿಸಿದರು. ಫಕ್ಕೀರೇಶ ವಂದಿಸಿದರು, ಶಿಬಿರಾರ್ಥಿ ವೀರೇಶ ಎಂ.ಸಿ. ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next