Advertisement

“ಸ್ವಾರ್ಥಕ್ಕೋಸ್ಕರ ನಾಡಿನ ಸಂಸ್ಕೃತಿ ನಾಶ’

12:26 PM May 08, 2017 | |

ಆನೇಕಲ್‌: ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೋಸ್ಕರ ಪರಂಪರೆಯಿಂದ ಬೆಳೆದು ಬಂದಿರುವ ತಮ್ಮ ನಾಡಿನ ಸಂಸ್ಕೃತಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷ ಹನುಮದಾಸ್‌ ತಿಳಿಸಿದರು.

Advertisement

ತಾಲೂಕಿನ ಚಂಬೇನಹಳ್ಳಿ ಗ್ರಾಮದ ಬಳಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 102ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ  ಎರಡು ಸಾವಿರ ವರ್ಷಗಳಿಂದ ಹಿಂದೆ ಆಡಳಿತ ನಡೆಸಿದ ರಾಜರ ಕಾಲದಲ್ಲಿ ಆಡಳಿತ ಭಾಷೆ ಕನ್ನಡವಾಗಿತ್ತು. ಆದರೆ, ಇಂದು ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕೋಸ್ಕರ ಭಾಷೆಯನ್ನೇ ಬಲಿ ಕೊಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.

ಜಿಪಂ ಸದಸ್ಯೆ ಪವಿತ್ರಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡ ಉಳಿಸಿ ಬೆಳಸಬೇಕಾದದ್ದು ತಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಯಮರೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಪಂಚಾಯ್ತಿಗೊಂದು ಕನ್ನಡ ಭವನನ್ನು ನಿರ್ಮಿಸಿ ಕೊಡುವುದಾಗಿ ಕಸಾಪ ತಾಲೂಕು ಅಧ್ಯಕ್ಷ ನವೀನ್‌ ಕುಮಾರ್‌ ಬಾಬು ತಿಳಿಸಿದ್ದು, ಅದಕ್ಕೆ ಬೇಕಾದ ಜಾಗ ಹಾಗೂ ದಾಖಲೆ ಶೀಘ್ರವೇ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್‌ ಬಾಬು ಮಾತನಾಡಿ, ಕನ್ನಡ ನಾಡು, ನುಡಿ ಸಾಹಿತ್ಯದ ರಸದೌತಣವನ್ನು ಪ್ರತಿ ಹಳ್ಳಿ ಹಳ್ಳಿಗೂ ಪಸರಿಸುವತ್ತಾ ಕನ್ನಡ ಸಾಹಿತ್ಯ ಪರಿಷತ್‌ ದಿಟ್ಟ ಹೆಜ್ಜೆ ಇಟ್ಟಿದೆ. ಕನ್ನಡ ಭಾಷೆಯನ್ನು ಕುವೆಂಪು ಅವರಿಂದ ದ.ರಾ. ಬೇಂದ್ರೆ ಅವರಂತಹ ನೂರಾರು ಕವಿಗಳು, ಸಾಹಿತಿಗಳು, ಸಂಸ್ಕೃತಿ ಮತ್ತು ಕನ್ನಡದ ಬಗ್ಗೆ ಅಪಾರ ಸೇವೆ ಸಲ್ಲಿಸಿರುವುದು ಸ್ಮರಣೀಯವಾದುದು.

ಎಲ್ಲಾ ಬುದ್ಧಿ ಜೀವಿಗಳು, ಜನಪ್ರತಿನಿಧಿಗಳು ಕನ್ನಡ ಭಾಷೆಯ ಬಗ್ಗೆ ಹೆಚ್ಚು ಒಲವು ತೋರಿಸಿ, ಉಳಿಸಿ ಬೆಳೆಸುವ ಶಪಥ ಮಾಡಬೇಕಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷ ಅಪ್ಸರ್‌ ಅಲಿಖಾನ್‌, ಸಜಾìಪುರ ಹೋಬಳಿ ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್‌, ಮಾರುತಿ, ಮೂರ್ತಿ, ಬಾಲಾಜಿ, ರಾಮಸ್ವಾಮಿ, ಕೂತಗಾನಹಳ್ಳಿ ರಾಮು, ಎಂ.ರಾಜಮ್ಮ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next