Advertisement
ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣದೊಳಗೆ 75 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕೆ ಆದ್ಯತೆ ಕೊಡಬೇಕು. ಆರೋಗ್ಯವಿಲ್ಲದೆ ಏನೇ ಸಾಧಿಸಿದರೂ ಅದು ವ್ಯರ್ಥ. ಇಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬರಾದರೂ ಕಾಯಿಲೆಗೆ ಬಿದ್ದವರು ಇರುತ್ತಾರೆ. ನಾನು ಎಂಬಿಬಿಎಸ್ ಓದಿರುವ ವೈದ್ಯನಲ್ಲ. ಆರೋಗ್ಯ ಕ್ಷೇತ್ರದಲ್ಲಿ ಪರಿಣಿತಿಯನ್ನೂ ಸಾಧಿಸಿಲ್ಲ. ಆದರೂ ನಾನು 2009ರಲ್ಲಿ ಆರೋಗ್ಯ ಸಚಿವನಾದೆ. 108 ಆ್ಯಂಬುಲೆನ್ಸ್ ಶುರು ಮಾಡಿದೆ. ಇದೀಗ ಮತ್ತೆ ಅದೇ ಖಾತೆ ಒಲಿದು ಬಂದಿದ್ದು, ನನ್ನ ಅದೃಷ್ಟವೇ ಸರಿ. ಹಾಗಾಗಿ ಬಡವರ ಆರೋಗ್ಯಕ್ಕೆ ನನ್ನ ಮೊದಲ ಆದ್ಯತೆ. ಚಿಕಿತ್ಸೆ ಕೇಳಿಕೊಂಡು ಬರುವ ರೋಗಿಗಳಿಮ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ ಎಂದು ತಿಳಿಸಿದರು.
Related Articles
Advertisement
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿದರು. ಸಂಸದ ಪ್ರತಾಪಸಿಂಹ, ಶಾಸಕರಾದ ಎಲ್. ನಾಗೇಂದ್ರ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿ ರಾಮ್ ಜಿ. ಶಂಕರ್, ಪಾಲಿಕೆ ಆಯುಕ್ತ ಗುರು ದತ್ತಹೆಗ್ಡೆ, ಡಿಎಚ್‌ಒ ಡಾ.ವೆಂಕಟೇಶ್, ಜಿಲ್ಲಾ ಶಸ ಚಿಕಿತ್ಸಕ ಡಾ.ಲಕ್ಷ್ಮಣ್ ಸೇರಿದಂತೆ ಇತರರು ಹಾಜರಿದ್ದರು.
ಶವಾಗಾರ ಸ್ಥಳಾಂತರ: ಸದ್ಯ ಜಿಲ್ಲಾಸ್ಪತ್ರೆಗೆ ಸಮೀಪ ದಲ್ಲೇ ಶವಾಗಾರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಆಸ್ಪತ್ರೆ ಆಸುಪಾಸಿನ ಮನೆಗಳ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮಕ್ಕಳು, ವೃದ್ಧರು ಶವಾಗಾರ ನಿರ್ಮಾಣದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಶಾಸಕ ಎಲ್.ನಾಗೇಂದ್ರ ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆ ಬಳಿ ಶವಾಗಾರವನ್ನು ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.