ಬಂಟ್ವಾಳ: ಪುರಾಣದಲ್ಲಿ ರಾಕ್ಷಸರ ಅಟ್ಟಹಾಸ ಮಿತಿ ಮೀರಿದಾಗ ದುರ್ಗೆ ಅವತರಿಸಿ ರಾಕ್ಷಸರನ್ನು ಸಂಹರಿಸಿ ನಾಡಿಗೆ ಸುಭಿಕ್ಷೆ ನೀಡಿದಳು. ಯುಗ ಬದಲಾದರೂ ಸಮಾಜಘಾತುಕ ಶಕ್ತಿಗಳೆಂಬ ರಾಕ್ಷಸ ಪ್ರವೃತ್ತಿಯ ವ್ಯಕ್ತಿಗಳು ಭಯ ಹುಟ್ಟಿಸುವ ರೀತಿಯಲ್ಲಿ ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ವತಿಯಿಂದ ಜರಗಿದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿ ಇದರ ಅಧ್ಯಕ್ಷ ಪಿ. ಸತೀಶ್ ರಾವ್ ಧ್ವಜಾರೋಹಣ ನೆರವೇರಿಸಿದರು. ಮಂಗಳೂರು ಶ್ರೀ ರಾಮಕೃಷ್ಣ ಮಿಷನ್‌ನ ಸ್ವಾಮೀಜಿ ಶ್ರೀ ಏಕಗಮ್ಯಾನಂದಜೀ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಬಿ.ಸಿ. ರೋಡ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ. ಸತೀಶ್ ಭಂಡಾರಿ ಕುಳತ್ತಬೆಟ್ಟು, ಮಂಗಳೂರು ಉದ್ಯಮಿ ದಿವಾಕರ, ತುಂಬೆ ಕಾರ್ಪೊರೇಶನ್ ಬ್ಯಾಂಕ್‌ನ ಪ್ರಬಂಧಕ ಸಂದೇಶ್ ಎಸ್., ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಬಿ.ಸಿ. ರೋಡ್ ಪದ್ಮಾ ಸರ್ವಿಸ್‌ನ ಐತಪ್ಪ ಆಳ್ವ ಸುಜೀರುಗುತ್ತು, ಬಿಲ್ಲವ ಮಹಾಮಂಡಲ ವಕ್ತಾರದ ಕೆ. ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಬೂಡಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಉತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಕಲ್ಲಗುಡ್ಡೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಕೋಶಾಧಿಕಾರಿ ಜಗದೀಶ್ ಕುಮ್ಡೇಲು, ಮನೋಜ್ ಆಚಾರ್ಯ ನಾಣ್ಯ, ಮನೋಹರ ಕಂಜತ್ತೂರು, ಯಶೋದಾ ಬೊಳ್ಳಾರಿ, ಚಂದ್ರಾವತಿ, ರವಿ ಸನಿಲ್ ಕಚ್ಚಿಗುಡ್ಡೆ , ಬಾಲಕೃಷ್ಣ ವಳವೂರು, ಚಿದಾನಂದ ಮಜಿ, ಪ್ರಭಾ ತುಂಬೆ, ವನಿತಾ ಶಿವದಾಸ್ ತುಂಬೆ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಸುವರ್ಣ, ಗೌರವಾಧ್ಯಕ್ಷ ಸೀತಾರಾಮ ಬೆಳ್ಚಡ, ಉಪಾಧ್ಯಕ್ಷೆ ಶೋಭಾ ಗೋಪಾಲ ಮೈಂದನ್, ಕೋಶಾಧಿಕಾರಿ ಟಿ. ಸೋಮಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂತೋಷ್ ಕೋಟ್ಯಾನ್ ವಂದಿಸಿದರು. ಜಗದೀಶ್ ಕಡೆಗೋಳಿ ನಿರ್ವಹಿಸಿದರು.