Advertisement

ತಿರುಗಾಟದ ಬೆಳ್ಳಿಹಬ್ಬಕ್ಕೆ ಸಮ್ಮಾನದ ಕಿರೀಟ 

06:46 PM Apr 20, 2018 | Team Udayavani |

ತೊಂಬಟ್ಟು ವಿಶ್ವನಾಥ ಆಚಾರ್ಯರಿಗೆ ಪೆರ್ಡೂರು ಮೇಳದಲ್ಲಿ ತಿರುಗಾಟದ ಬೆಳ್ಳಿಹಬ್ಬದ ಸಂಭ್ರಮ.ಈ ನಿಮಿತ್ತ ಅವರ ಅಭಿಮಾನಿಗಳು ಎ. 21ರಂದು ಕುಂದಾಪುರದಲ್ಲಿ ಸಮ್ಮಾನ ಕಾರ್ಯಕ್ರಮವಿರಿಸಿಕೊಂಡಿದ್ದಾರೆ.ಬಳಿಕ ಪೆರ್ಡೂರು ಮೇಳದಿಂದ ಭೀಷ್ಮ ಪ್ರತಿಜ್ಞೆ- ಭದ್ರಸೇನ -ಬರ್ಬರೀಕ ಎಂಬ ಯಕ್ಷಗಾನ ಪ್ರದರ್ಶನವಿದೆ.

Advertisement

ವಿಶ್ವನಾಥ ಆಚಾರ್ಯರು ಪರಂಪರೆ- ಆಧುನಿಕತೆಯ ನಡುವಿನ ಕೊಂಡಿಯಾಗಿ ಗುರುತಿಸಿಕೊಂಡಿದ್ದಾರೆ.ಅವರ ಅಭಿಮನ್ಯು, ಬಬ್ರುವಾಹನ, ಚಿತಕೇತ-ಚಿತ್ರವಾಹನ, ಲವ-ಕುಶ, ಕೃಷ್ಣ-ಬಲರಾಮ,ಧರ್ಮಾಂಗದ, ಪುಷ್ಕಳ, ಮೀನಾಕ್ಷಿ ಮಂತ್ರಿ, ವೃಷಸೇನ, ರುಕಾ¾ಂಗ-ಶುಭಾಂಗ ಮುಂತಾದ ಪುಂಡುವೇಷಗಳು ಅಪಾರ ಜನ ಮನ್ನಣೆ ಪಡೆದಿವೆ.ಜಾಂಬವತಿ ಕಲ್ಯಾಣ,ಸುಭದ್ರಾ ಕಲ್ಯಾಣ,ಕನಕಾಂಗಿ ಕಲ್ಯಾಣ,ಕೃಷ್ಣ ಸಂಧಾನ ಸೈಂದವ ವಧೆ, ಗದಾಯುದ್ಧ ಮುಂತಾದ ಪ್ರಸಂಗಗಳಲ್ಲಿನ ಕೃಷ್ಣನ ವೇಷ ಅವರದ್ದೇ ಮರುಸೃಷ್ಟಿ ಅನ್ನುವಷ್ಟು ಆಕರ್ಷಕ.ನಾಗವಲ್ಲಿ,ಪವಿತ್ರ ಪದ್ಮಿನಿ, ಶಂಕರಾಭರಣ,ರಕ ¤ಕಣ್ಣೀರು, ಅಗ್ನಿ ನಕ್ಷತ್ರ, ಅಹಂ ಬ್ರಹ್ಮಾಸ್ಮಿ ಮುಂತಾದ ಆಧುನಿಕ ಪ್ರಸಂಗಳ ಪಾತ್ರಗಳೂ ಜನಮನ್ನಣೆಗೆ ಪಾತ್ರವಾಗಿವೆ. ಭಾಗವತಿಕೆಯನ್ನೂ ಮಾಡಬಲ್ಲ ಇವರ ಪದ್ಯದ ಎತ್ತುಗಡೆ ಹಿಮ್ಮೇಳ ಪ್ರಿಯರನ್ನು ರಂಜಿಸಿವೆ. ಸ್ತ್ರೀ ಭೂಮಿಕೆಯಲ್ಲೂ ಅಭಿನಯಿಸಬಲ್ಲ ಇವರು ಕಸೆ ವೇಷಗಳಾದ ಸುಭದ್ರೆ, ಭ್ರಮಳ ಕುಂತಳೆ, ಪದ್ಮಗಂದಿ ಪ್ರಮೀಳೆ ಮುಂತಾದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ಕುಂದಾಪುರ ತಾಲೂಕಿನ ತೊಂಬಟ್ಟು ಎಂಬಲ್ಲಿ ಅಣ್ಣಪ್ಪ ಆಚಾರ್ಯ ಮತ್ತು ಗಿರಿಜಾ ದಂಪತಿಯ ಪುತ್ರನಾಗಿ ಜನಿಸಿದ ಇವರು ಬಳಿಕ ಪೆರ್ಡೂರು,ಸಾಲಿಗ್ರಾಮ ನೀಲಾವರ, ಹಾಲಾಡಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next