Advertisement
ನಗರದ ಲಾಲ್‌ಬಾಗ್, ಪಿವಿಎಸ್, ಹಂಪನಕಟ್ಟೆ ಮುಂತಾದೆಡೆಗಳಲ್ಲಿ ಕಾಂಕ್ರೀಟ್ ರಸ್ತೆಯ ಮಧ್ಯಭಾಗದಲ್ಲಿ ಉದ್ದಕ್ಕೆ ಬಿರುಕು ಕಾಣಿಸಿಕೊಂಡಿದೆ. ಅಲ್ಲದೇ ಈ ಬಿರುಕಿನ ಮಧ್ಯಭಾಗದಲ್ಲಿಯೂ ಸ್ವಲ್ಪ ಖಾಲಿ ಸ್ಥಳ ಇದ್ದು, ಬಿರುಕಿನ ಒಂದು ಭಾಗ ಎತ್ತರ, ಮತ್ತೂಂದು ಭಾಗ ತಗ್ಗು ಇರುವುದರಿಂದ ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಇದು ಕಾಣಿಸದೇ ಬೀಳುವ ಘಟನೆ ಹೆಚ್ಚುತ್ತಿದೆ.