Advertisement

ಕೋವಿಡ್ 19 ತೆರಿಗೆ ಕೇವಲ ವದಂತಿ

02:49 AM May 25, 2020 | Sriram |

ಹೊಸದಿಲ್ಲಿ: ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟಕ್ಕಾಗಿ ಇನ್ನಷ್ಟು ಸಂಪನ್ಮೂಲ ಕ್ರೋಢೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಮೇಲೆ ವಿಪ್ಪತ್ತು ಸೆಸ್‌ (ಕೋವಿಡ್ 19 ತೆರಿಗೆ) ವಿಧಿಸಲಿದೆ ಎಂಬುದು ಕೇವಲ ವದಂತಿ. ಅಂತಹ ಯಾವುದೇ ಪ್ರಸ್ತಾವನೆಗಳು ಸರಕಾರದ ಮುಂದಿಲ್ಲ ಎಂದು ವಿತ್ತ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ವಿಪ್ಪತ್ತು ಸೆಸ್‌ ವಿಧಿಸುವುದೆಂದರೆ ಆಘಾತವೇ ಸರಿ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಸರಕಾರವು ಕೋವಿಡ್ 19 ತೆರಿಗೆ ಹೇರುವ ಸಿದ್ಧತೆಯಲ್ಲಿದೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ಮಾಡಿದ್ದ ವರದಿ ತಳ್ಳಿಹಾಕಿರುವ ಸಚಿವಾಲಯದ ಅಧಿಕಾರಿಗಳು, ಲಾಕ್‌  ಡೌನ್‌ನಿಂದಾಗಿ ಕೈಗಾರಿಕಾ ವಲಯ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜತೆಗೆ ಬೇಡಿಕೆ ಕುಸಿತ ಹಾಗೂ ಕಾರ್ಮಿಕರ ಕೊರತೆಯನ್ನೂ ಎದುರಿ ಸುತ್ತಿದೆ. ಹೆಚ್ಚುವರಿ ತೆರಿಗೆ ಅಥವಾ ಸೆಸ್‌ ವಿಧಿಸುವ ಆಲೋ ಚನೆಗಳು ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next