Advertisement

ಕೋರ್ಟ್‌ಗಳಿಗೆ ಹೃದಯ ಬೆಸೆಯಲು ಬರದು: ಶ್ರೀ ಶ್ರೀ

08:27 AM Nov 18, 2017 | Team Udayavani |

ಲಕ್ನೋ: ಅಯೋಧ್ಯೆಯ ರಾಮಮಂದಿರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಶ್ರಮಿಸುತ್ತಿರುವ ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಶುಕ್ರವಾರ ಲಕ್ನೋದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

Advertisement

ದಾರುಲ್‌ ಉಲೂಮ್‌ ಫ‌ರಂಗಿಮಹಲ್‌ನ ನಾಯಕ ಹಾಗೂ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹಿರಿಯ ಸದಸ್ಯರೂ ಆದ ಮೌಲಾನಾ ಖಾಲಿದ್‌ ರಶೀದ್‌ ಫ‌ರಂಗಿಮಹ್ಲಿ ಸೇರಿದಂತೆ ಹಲವು ನಾಯಕರನ್ನು ಭೇಟಿಯಾದ ಗುರೂಜಿ, “ಎಲ್ಲ ಸಮಸ್ಯೆಗಳನ್ನೂ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳೋಣ. ನಾವೆಲ್ಲರೂ ನ್ಯಾಯಾಲಯವನ್ನು ಗೌರವಿಸುತ್ತೇವೆ. ಆದರೆ, ಕೋರ್ಟ್‌ಗಳು ಹೃದಯಗಳನ್ನು ಬೆಸೆಯುವುದಿಲ್ಲ. ಕೋರ್ಟ್‌ನ ತೀರ್ಪು 50-100 ವರ್ಷಗಳ ಕಾಲ ಹಾಗೆಯೇ ಉಳಿಯಬಹುದು. ಆದರೆ, ಹೃದಯಗಳ ಮೂಲಕ ಕಂಡುಕೊಂಡ ಪರಿಹಾರವು ಯುಗ ಯುಗಗಳ ಕಾಲ ಸ್ಮರಣೀಯವಾಗಿ ಇರುತ್ತದೆ’ ಎಂದಿದ್ದಾರೆ.

ಜತೆಗೆ, ಈ ಮಾತುಕತೆಯು ದೇಶದಲ್ಲಿ ದೊಡ್ಡದೊಂದು ಸಾಧನೆಗೆ ನಾಂದಿ ಹಾಡುತ್ತದೆಂಬ ವಿಶ್ವಾಸವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next