Advertisement

ಪೃಥ್ವಿ ಶಾ ವಿರುದ್ಧ ದೂರು ಸ್ವೀಕರಿಸಿದ ನ್ಯಾಯಾಲಯ

12:15 AM Apr 06, 2023 | Team Udayavani |

ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಗೆಳೆಯ ಸುರೇಂದರ್‌ ಯಾದವ್‌ ವಿರುದ್ಧ ಭೋಜಪುರಿ ನಟಿ ಸಪ್ನಾ ಗಿಲ್‌ ನೀಡಿರುವ ಕ್ರಿಮಿನಲ್‌ ದೂರನ್ನು ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.

Advertisement

ಲೈಂಗಿಕ ಕಿರುಕುಳ, ಹಲ್ಲೆ ಸೇರಿದಂತೆ ಹಲವು ಆರೋಪಗಳನ್ನು ಸಪ್ನಾ ಮಾಡಿದ್ದಾರೆ. ಹಾಗೆಯೇ ಕ್ರಿಕೆಟಿಗನ ವಿರುದ್ಧ ಎಫ್ಐಆರ್‌ ದಾಖಲಿಸಲು ಸಹಕರಿಸದ ಪೊಲೀಸ್‌ ಅಧಿಕಾರಿಗಳಾದ ಸತೀಶ್‌ ಕವಂಕರ್‌, ಭಾಗವತ್‌ ಗರಾಂಡೆ ವಿರುದ್ಧವೂ ಕ್ರಿಮಿನಲ್‌ ದೂರನ್ನು ದಾಖಲಿಸಲಾಗಿದೆ. ಏ.17ರಂದು ಇದರ ವಿಚಾರಣೆ ನಡೆಯಲಿದೆ. ಫೆ.15ರಂದು ಮುಂಬೈನ ದೇಶೀಯ ವಿಮಾನ ನಿಲ್ದಾಣದ ಸಮೀಪದ ಪಂಚತಾರಾ ಹೋಟೆಲೊಂದರಲ್ಲಿ ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಗೆಳೆಯ ಸುರೇಂದರ್‌ ಯಾದವ್‌ ಮೇಲೆ ಹಲ್ಲೆಯಾಗಿತ್ತು.

ಭೋಜಪುರಿ ನಟಿ ಸಪ್ನಾ ಗಿಲ್‌ ಮತ್ತವರ ಗೆಳೆಯರು ಸೆಲ್ಫಿ ಕೇಳಿ ಗಲಾಟೆಯೆಬ್ಬಿಸಿದರು. ಬೇಸ್‌ಬಾಲ್‌ ಬ್ಯಾಟ್‌ನಲ್ಲಿ ಹಲ್ಲೆ ಮಾಡಿದರು ಎಂದು ದೂರು ಸಲ್ಲಿಸಲಾಗಿತ್ತು. ಫೆ.16ರಂದು ಸಪ್ನಾ ಗಿಲ್‌ರನ್ನು ಬಂಧಿಸಲಾಗಿತ್ತು. ಆಮೇಲೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಅವರೇ ಪೃಥ್ವಿ ಶಾರನ್ನು ತಪ್ಪಿತಸ್ಥ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next