Advertisement

ದಂಪತಿ ಡೆ‌ತ್‌ನೋಟಲ್ಲಿ ಕಾರ್ಪೊರೇಟರ್‌ ಹೆಸರು

12:10 PM Aug 23, 2017 | Team Udayavani |

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್‌ನ ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌ ಸೇರಿದಂತೆ ಕೆಲವರು ಸಾಲದ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾವಳ್ಳಿಯಲ್ಲಿ ನಡೆದಿದೆ.

Advertisement

ಮಾವಳ್ಳಿ ನಿವಾಸಿ ನಂಜುಂಡಸ್ವಾಮಿ (47) ಮತ್ತು ಇವರ ಪತ್ನಿ ಪುಷ್ಪಲತಾ (45) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ದಂಪತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದಕ್ಕೂ ಮೊದಲು ಡೆತ್‌ನೋಟ್‌ ಬರೆದಿಟ್ಟಿರುವ ದಂಪತಿ, ನಮ್ಮ ಸಾವಿಗೆ  ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌, ಕೆ.ಜಿ ಕೃಷ್ಣ , ದೇವೇಗೌಡ, ತೇಜಸ್ವಿನಿ ಗೌಡ ಸೇರಿದಂತೆ ಇತರರು ಕಾರಣ ಎಂದು ಆರೋಪಿಸಿದ್ದು, ಸಾಲದ ವಿಚಾರವಾಗಿ ಇವರು ನಿತ್ಯ ಕಿರುಕುಳ ನೀಡುತ್ತಿದ್ದರು.ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿರುವುದಾಗಿ ಕಲಾಸಿಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಕಲಾಸಿಪಾಳ್ಯದಲ್ಲಿ ಮಿಲಿಟರಿ ಹೊಟೇಲ್‌ ನಡೆಸುತ್ತಿದ್ದ ನಂಜುಂಡಸ್ವಾಮಿ ದಂಪತಿಗೆ ಪುತ್ರ ಚಂದನ್‌ ಹಾಗೂ ಒಬ್ಬ ಮಗಳಿದ್ದಾಳೆ. ಚಂದನ್‌ ಕೂಡಾ ವ್ಯವಹಾರ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಸಾಲ ಮಾಡಿಕೊಂಡಿದ್ದಾರೆ. ಆದರೆ, ಎಷ್ಟು ಹಣ ಪಡೆದಿದ್ದಾರೆ. ಯಾವಾಗ ಪಡೆದಿದ್ದಾರೆ ಎಂಬುದು ಗೊತ್ತಿಲ್ಲ. ತನಿಖೆ ನಡೆಸಿದ ಬಳಿಕವಷ್ಟೇ ಎಲ್ಲವೂ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ನನ್ನ ಹೇಸರೇಕೆ ಬರೆದರೋ ಗೊತ್ತಿಲ್ಲ 
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌,  ಕಳೆದ 18 ವರ್ಷಗಳಿಂದ ನಂಜುಂಡಸ್ವಾಮಿ ಕುಟುಂಬ ಪರಿಚಯವಿದೆ. ಭೂಮಿ ಖರೀದಿ, ಹಣಕಾಸಿನ ವಿಚಾರವಾಗಿ ನಮ್ಮಿಬ್ಬರ ನಡುವೆ ವ್ಯವಹಾರ ಇತ್ತು. ಆದರೆ, ಕಳೆದ ಎರಡುವರೆ ವರ್ಷಗಳಿಂದ ಎಲ್ಲ ರೀತಿಯ ವ್ಯವಹಾರವನ್ನು ನಿಲ್ಲಿಸಿದ್ದೇವೆ.

Advertisement

ಹೀಗಾಗಿ, ಈ ಅವಧಿಯಲ್ಲಿ ಯಾವುದೇ ರೀತಿಯ ಭೂಮಿ ಹಾಗೂ ಹಣಕಾಸಿನ ವ್ಯವಹಾರ ನಡೆಸಿಲ್ಲ. ಇತ್ತೀಚೆಗೆ ನಂಜುಂಡಸ್ವಾಮಿ ಮನೆಗೆ ಬಂದಿದ್ದು, ಹಣ ಕೇಳಿದರು. ಆದರೆ, ನನ್ನ ಬಳಿ ಇಲ್ಲ. ಮುಂದೆ ನೋಡೋಣ ಎಂದು ಕಳುಹಿಸಿದ್ದೆ. ಅಲ್ಲದೇ ಅವರಿಗೆ ನಾನು ಯಾವುದೇ ಹಣ ಕೊಟ್ಟಿಲ್ಲ. ಡೆತ್‌ನೋಟ್‌ನಲ್ಲಿ ನಮ್ಮ ಹೆಸರು ಏಕೆ ಬರೆದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next