ಮುಂಬಯಿ, ಜು. 27: ಹುತಾತ್ಮರ ಕುಟುಂಬ ಗಳು ತಮ್ಮ ಹೃದಯವನ್ನು ಗಟ್ಟಿಗೊಳಿಸುವುದು ಎಷ್ಟು ಕಷ್ಟ ಎಂದು ನಾವು ನೋಡಿದ್ದೇವೆ. ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತವಾಗಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದರು.
ಕಾರ್ಗಿಲ್ ವಿಜಯ ದಿನಾಚರಣೆಯ 22ನೇ ವಾರ್ಷಿಕೋತ್ಸವದ ಸಂದರ್ಭ ಅವರು ಜು. 26ರಂದು ರಾಜಭವನದಲ್ಲಿ ಕಾರ್ಗಿಲ್ ಯೋಧರು ಮತ್ತು ಹುತಾತ್ಮರ ಕುಟುಂಬಗಳನ್ನು ಸಮ್ಮಾನಿಸಿದರು. ಈ ಸಂದರ್ಭ ಹುತಾತ್ಮ ಕ್ಯಾಪ್ಟನ್ ವಿನಾಯಕ ಗೋರ್ ಅವರ ವೀರ ತಾಯಿ ಅನುರಾಧಾ ಗೋರ್ ಬರೆದ ಇಂಪಾಸಿಬಲ್ ಟು ಪಾಸಿಬಲ್ ಪುಸ್ತಕವನ್ನು ಬಿಡುಗಡೆ ಮಾಡಿ, ಕಾರ್ಗಿಲ್ ಯುದ್ಧದ ಯೋಧರಿಗೆ ಗೌರವ ಸಲ್ಲಿಸಿ, ಭಾರತವು ಶಾಂತಿಯನ್ನು ಬಯಸಿದ್ದರೂ ದೇಶವು ಶತ್ರು ರಾಷ್ಟ್ರಗಳಿಂದ ಆವೃತವಾಗಿದೆ ಎಂಬ ಅಂಶವನ್ನು ಮರೆಯಲು ಸಾಧ್ಯವಿಲ್ಲ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದೇಶದ ದೂರದ ಗಡಿ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ಮತ್ತು ಸುಸಜ್ಜಿತ ವಾಯುನೆಲೆಗಳನ್ನು ಸ್ಥಾಪಿಸಲಾಗಿದೆ. ತನ್ನ 22 ವರ್ಷದ ಸಹೋದರಿಯ ಪತಿ 1962ರ ಯುದ್ಧದಲ್ಲಿ ಹುತಾತ್ಮರಾದರು ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ಡೋಕ್ಲಾಮಾ ಮತ್ತು ಗಾಲ್ವಾನ್‌ನಲ್ಲಿ ಚೀನ ಹೊಸ ಭಾರತದ ಬಲವನ್ನು ಕಂಡಿದೆ.
ಕಾರ್ಗಿಲ್ ಯುದ್ಧದಲ್ಲಿ ಭಾರತದ ಕಾರ್ಯತಂತ್ರ ಮತ್ತು ರಾಜತಾಂತ್ರಿಕತೆ ಗೆದ್ದಿದೆ. ಇಂಪಾಸಿಬಲ್ ಟು ಪಾಸಿಬಲ್ ಕಾರ್ಗಿಲ್ ಯುದ್ಧವನ್ನು ನೋಡುವ ಸಮಗ್ರ ಪುಸ್ತಕವಾಗಿದೆ ಎಂದು ಹೇಳಿದರು. ಹವಲ್ದಾರ್ ದಿಗೇಂದ್ರ ಸಿಂಗ್, ಹವಲ್ದಾರ್ ದೀಪ್‌ಚಂದ್, ಹವಾಲ್ದಾರ್ ಮಧುಸೂದನ್ ಸರ್ವೆ, ಹವಾಲ್ದಾರ್ ಪಾಂಡುರಂಗ್ ಅಂಬ್ರೆ ಮತ್ತು ಹವಾಲ್ದಾರ್ ದತ್ತ ಚವಾಣ, ಸ್ಕ್ವಾಡ್ರನ್ ನಾಯಕ ರಾಹುಲ್ ದುಬೆ, ಕ್ಯಾಪ್ಟನ್ ರೂಪೇಶ್ ಕೊಹ್ಲಿ, ಕ್ಯಾಪ್ಟನ್ ವಿದ್ಯಾ ರತ್ನಪಾರ್ಕಿ, ಸವಿತಾ ದೋಂಧೆ, ಸವಿತಾ ದೊಂಡೆ ಅವರನ್ನು ಗೌರವಿಸಲಾಯಿತು.
ಲೇಖಕಿ ಅನುರಾಧಾ ಗೋರ್ ಅವರು ಇಂಪಾಸಿಬಲ್ ಟು ಪಾಸಿಬಲ್… ಪುಸ್ತಕವನ್ನು ಬರೆಯುವ ಹಿಂದಿನ ಪ್ರೇರಣೆ ಮತ್ತು ಪಾತ್ರವನ್ನು ವಿವರಿಸಿದರು. ದಿನಕರ್ ಗಂಗಲ್ ಮತ್ತು ಗ್ರಂಥಾಲಿ ಪ್ರಕಾಶನ್ ಸಂಸ್ಥೆಯ ಸುದೇಶ್ ಹಿಂಗ್ಲಾಸ್ಪುರ್ಕರ್ ಅವರನ್ನು ರಾಜ್ಯಪಾಲರು ಸಮ್ಮಾನಿಸಿದರು. ಆರಂಭದಲ್ಲಿ, ಕಾರ್ಗಿಲ್ ಯುದ್ಧದ ವರ್ಣಚಿತ್ರಗಳ ಪ್ರದರ್ಶನವನ್ನು ರಾಜ್ಯಪಾಲರು ಉದ್ಘಾಟಿಸಿದರು.
ಶಾಸಕ ಮಂಗಲ್ ಪ್ರಭಾತ್ ಲೋಧಾ, ಲೋಧಾ ಫೌಂಡೇಶನ್ ಅಧ್ಯಕ್ಷ ಮಂಜು ಲೋಧಾ, ಅನುರಾಧಾ ಗೋರ್ ಮತ್ತು ಮುಂಬಯಿ ವಾರ್ಡ್ ಮುಖ್ಯಸ್ಥ ಏರ್ ವೈಸ್ ಮಾರ್ಷಲ್ ಎಸ್. ಆರ್. ವಾಯ್ಸ್ ಆಫ್ ಮುಂಬಯಿ ಮತ್ತು ಲೋಧಾ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹರ್ಷಲ್ ಕನ್ಸಾರ ಕಾರ್ಯಕ್ರಮ ನಡೆಸಿಕೊಟ್ಟರು.