ಬೆಂಗಳೂರು: ಗಣರಾಜ್ಯ ದಿನ ಪ್ರಯುಕ್ತ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪುಷ್ಪವೃಷ್ಟಿಗೆ ನಿಯೋಜಿಸಿದ್ದ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ್ದು, ಆತಂಕಕ್ಕೆ ಕಾರಣವಾಯಿತು.
ವೇದಿಕೆ ಮುಂಭಾಗದಲ್ಲಿ ಎದ್ದ ಧೂಳು ವೇದಿಕೆಯನ್ನಾವರಿಸಿದ್ದು, ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆೆ.
ಪುಷ್ಪ ವೃಷ್ಟಿಗೆ ಐಎಎಫ್ ಕಾಪ್ಟರ್ ನಿಯೋಜಿಸ ಲಾಗಿತ್ತು. ಅದು ಸಾಕಷ್ಟು ಕೆಳಭಾಗದಲ್ಲಿ ಹಾರಾಟ ನಡೆಸಿ, ಧೂಳೆಬ್ಬಿಸಿತು. ಪುಷ್ಪವೃಷ್ಟಿಗೂ ಮುಂಚೆ ಅಲ್ಲಿ ನೆರೆದಿದ್ದವರ ಮೇಲೆ ಧೂಳು ಹಾರಿತ್ತು. ವೇದಿಕೆ ಮೇಲೆ ಧ್ವಜಾರೋಹಣ ನಡೆಸಿ ಧ್ವಜಕ್ಕೆ ಗೌರವ ಸಲ್ಲಿಸುತ್ತಿದ್ದ ರಾಜ್ಯಪಾಲ ವಿ.ಆರ್. ವಾಲಾ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಇತರ ಗಣ್ಯರ ಮೇಲೆಯೂ ಧೂಳು ಬಿತ್ತು. ಅವರು ಇದರಿಂದ ತಪ್ಪಿಸಿಕೊಳ್ಳಲು ಹಿಂದೆ ಸರಿದು ಕಣ್ಣು ಮುಚ್ಚಿಕೊಂಡ ಘಟನೆ ನಡೆಯಿತು.
ಹದ್ದುಗಳು ಹಾರಾಡುತ್ತಿದ್ದುದರಿಂದ ಅನಿ ವಾರ್ಯವಾಗಿ ಹೆಲಿಕಾಪ್ಟ್ರ್‌ನ ಹಾರಾಟದ ಎತ್ತರವನ್ನು ಕಡಿಮೆ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ವರದಿ ಕೇಳಲಾಗುವುದು. ಇದುವರೆಗೂ ಈ ರೀತಿಯ ಘಟನೆ ನಡೆದಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ
– ಭಾಸ್ಕರ್‌ರಾವ್, ನಗರ ಪೊಲೀಸ್ ಆಯುಕ್ತ