Advertisement

ತಾಮ್ರದ ಪಾತ್ರೆಯು ಫ‌ಳಫ‌ಳ ಹೊಳೆಯಲಿ!

06:45 AM Aug 18, 2017 | |

ತಾಮ್ರದ ಪಾತ್ರೆಗಳು ನಮ್ಮ ಸಾಂಪ್ರದಾಯಿಕ ಅಡುಗೆ ಪರಿಕರಗಳು. ತಾಮ್ರದ ಪಾತ್ರೆಗಳು ಬರೇ ಅಡುಗೆ ಪಾತ್ರೆಗಳು ಮಾತ್ರವಲ್ಲದೆ, ಆರೋಗ್ಯಕರ ಅಂಶಗಳಿಂದ ಕೂಡಿದವೂ ಹೌದು! ಮನೆ ಮನೆಗಳಲ್ಲಿ ಹೆಚ್ಚಾಗಿ ಪೂಜೆಗಳಿಗೆ ತಾಮ್ರದ ಪಾತ್ರೆಯನ್ನು ಬಳಸಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರು ತುಂಬಿಸಿ ಬೆಳಿಗ್ಗೆ ಅದನ್ನು ಕುಡಿಯುವುದು, ಅಡುಗೆ ಮಾಡುವುದು, ಊಟ ಮಾಡುವುದರಿಂದಲೂ ನಾವು ಬಹಳಷ್ಟು ಆರೋಗ್ಯಕರ ಅಂಶಗಳನ್ನು ಪಡೆಯುತ್ತೇವೆ ಎನ್ನುವುದು ಆಯುರ್ವೇದದ ಪ್ರಕಾರ ನಮಗೆ ತಿಳಿದ ವಿಷಯ. 

Advertisement

ತಾಮ್ರದ ಪಾತ್ರೆಗಳನ್ನು ನಿರಂತರ ಬಳಸುವುದರಿಂದ ಮತ್ತು ಗಾಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಅದರ ಹೊಳಪನ್ನು ಕಳೆದುಕೊಂಡು ಕಪ್ಪಾಗುತ್ತದೆ. ಹಾಗಾಗಿ ಅವುಗಳಲ್ಲಿಟ್ಟ ಆಹಾರ ಕೆಡದಂತೆ ಮತ್ತು ಯಾವಾಗಲೂ ಹೊಳೆಯುವಂತೆ ನೋಡಿಕೊಳ್ಳುವುದು ಬಹುಮುಖ್ಯ ಕೆಲಸ. ಹಾಗಂತ ಮಾರುಕಟ್ಟೆಯಲ್ಲಿ ದೊರೆಯುವ ಸ್ವತ್ಛಕಗಳನ್ನು ತಂದು ತಾಮ್ರದ ಪಾತ್ರೆಗಳನ್ನು ಸ್ವತ್ಛಗೊಳಿಸುವುದಕ್ಕಿಂತ ಮನೆಯಲ್ಲಿಯೇ ಇರುವ ನೈಸರ್ಗಿಕವಾದ ಕೆಲವು ವಸ್ತುಗಳನ್ನು ಉಪಯೋಗಿಸಿ ತಾಮ್ರದ ಪಾತ್ರೆಗಳನ್ನು ಫ‌ಳಫ‌ಳ ಹೊಳೆಯುವಂತೆ ಮಾಡಬಹುದು. 

ಹುಣಸೆ ಹುಳಿ ಮತ್ತು ಉಪ್ಪು
ದಿನನಿತ್ಯ ಪೂಜೆಗೆ ಬಳಸುವ ತಾಮ್ರದ ಪಾತ್ರೆಗಳನ್ನು ಬರೇ ಸೋಪು ಹಾಕಿ ಎಷ್ಟು ತಿಕ್ಕಿದರೂ ಅವು ಹೆಚ್ಚಿನ ಹೊಳಪು ಪಡೆಯಲಾರವು. ಅದೇ ಹುಣಸೆ ಹಣ್ಣಿಗೆ ಸ್ವಲ್ಪ ಉಪ್ಪು$ಹಾಕಿ ಪಾತ್ರೆಗಳನ್ನು ಉಜ್ಜಿದರೆ ಪಾತ್ರೆಗಳು ಪಳಪಳ ಹೊಳೆಯುತ್ತವೆ.

ನಿಂಬೆಹಣ್ಣು ಮತ್ತು ಉಪ್ಪು
ಸ್ವಲ್ಪ ಉಪ್ಪು ಮತ್ತು ನಿಂಬೆಹಣ್ಣು ತಗೊಂಡು ತಾಮ್ರದ ಪಾತ್ರೆಗಳ ಮೇಲೆ ಮೆದುವಾಗಿ ಉಜ್ಜಿ ತಿಕ್ಕಿ ತೊಳೆದರೆ ಪಾತ್ರೆಗಳು ಸ್ವತ್ಛವಾಗುತ್ತವೆ. ಜಾಸ್ತಿ ಕಪ್ಪಗಾಗಿದ್ದರೆ, ತಳಭಾಗದಲ್ಲಿ ಅಥವಾ ಬದಿಗಳಲ್ಲಿ ಗಟ್ಟಿ ಕಪ್ಪು ಕಲೆಗಳಿದ್ದರೆ ಉಪ್ಪು-ನಿಂಬೆಯ ಪೇಸ್ಟ್‌ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಮೊದಲಿನಂತೆ ಪಾತ್ರೆಗಳು ಹೊಳೆಯುತ್ತವೆ.

ವಿನೆಗರ್‌
ವಿನೆಗರನ್ನು ತಗೆದುಕೊಂಡು ಅದನ್ನು ಉಪ್ಪಿನ ಜೊತೆ ಸೇರಿಸಿ ತಾಮ್ರದ ಪಾತ್ರೆಗಳಿಗೆ ಹಚ್ಚಿ ಒಂದು ಹತ್ತು ನಿಮಿಷ ಬಿಟ್ಟು ತೊಳೆಯುವುದರಿಂದಲೂ ಪಾತ್ರೆಗಳು ಫ‌ಳಫ‌ಳ ಹೊಳೆಯುತ್ತವೆ.

Advertisement

ಬೇಕಿಂಗ್‌ ಸೋಡಾ
ತಾಮ್ರದ ಪಾತ್ರೆಯನ್ನು ತೊಳೆಯಲು ಬೇಕಿಂಗ್‌ ಸೋಡಾ ಉಪಯೋಗಿಸುವುದು ಒಂದು ಉತ್ತಮ ವಿಧಾನ. ಬೇಕಿಂಗ್‌ ಸೋಡಾವನ್ನು ನಿಂಬೆ ರಸದೊಂದಿಗೆ ಮಿಕÕ… ಮಾಡಬಹುದು, ಅಥವಾ ಹಾಗೆಯೇ ಉಪಯೋಗಿಸಲೂಬಹುದು.

ವಿನಿಗರ್‌ ಮತ್ತು ಮೈದಾ ಹಿಟ್ಟು
ಒಂದು ಕಪ್‌ ವಿನಿಗರ್‌ಗೆ ಒಂದು ಟೇಬಲ್‌ ಸ್ಪೂನ್‌ ಉಪ್ಪು, ಸ್ವಲ್ಪಮೈದಾಹಿಟ್ಟನ್ನು ಸೇರಿಸಿ ಪೇÓr… ಮಾಡಿಕೊಂಡು ತಾಮ್ರದ ಪಾತ್ರೆಯ ಕಲೆಯಾಗಿರುವ ಭಾಗಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಟ್ಟು ಬಿಸಿ ನೀರಿನಿಂದ ತೊಳೆದರೆ ಪಾತ್ರೆಯು ಹೊಸದರಂತೆ ಕಾಣಿಸುತ್ತದೆ.

– ಎಸ್‌ಎನ್‌

Advertisement

Udayavani is now on Telegram. Click here to join our channel and stay updated with the latest news.

Next