Advertisement

ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ; ಯಚ್ಚರ ಸ್ವಾಮೀಜಿ

03:06 PM Feb 15, 2023 | Team Udayavani |

ನರಗುಂದ: ನಮ್ಮ ಭಾರತ ದೇಶದಲ್ಲಿ ಮಠಗಳು ಭಕ್ತರಿಂದ ನಿರ್ಮಾಣವಾಗಿವೆ. ಭಕ್ತರು ಮಠಗಳನ್ನು ಸಂದರ್ಶಿಸುವ ಮೂಲಕ ತಮ್ಮ ಹಾಗೂ ಕುಟುಂಬದಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ದೊಡ್ಡದು ಎಂದು ಶಿರೋಳ ಯಚ್ಚರಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಶಿರೋಳ ಯಚ್ಚರಸ್ವಾಮಿಗಳ ಗವಿಮಠದ ದಾಸೋಹ ಭವನ, ಶ್ರೀಗುರು ಕುಟೀರ, ಮಹಾದ್ವಾರ, ವಿದ್ಯಾರ್ಥಿ ವಸತಿ ನಿಲಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ನಮ್ಮ ಮಠವನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಇದರ ಅಭಿವೃದ್ಧಿಗೆ ಸುತ್ತಮುತ್ತಲಿನ ಭಕ್ತರ ಶ್ರಮ, ಸಹಾಯ, ಸಹಕಾರ ಮುಖ್ಯವಾಗಿದೆ ಎಂದರು.

ಶಿರೋಳ ಯಚ್ಚರಸ್ವಾಮಿಗಳ ಗವಿಮಠ ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಶ್ರೀಗಳು ಕಿರಿಯ ವಯಸ್ಸಿನಲ್ಲಿ ಶ್ರೀಮಠದ ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಕಾರ್ಯಕ್ಕೆ ಭಕ್ತರ ಸಹಕಾರವಿರಲಿ ಎಂದು ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಹೇಳಿದರು.

ಪ್ರಾಸ್ತಾವಿಕವಾಗಿ ಮಾದಾರ ಚನ್ನಯ್ಯ ಕೈಗಾರಿಕೆ ತರಬೇತಿ ಕೇಂದ್ರದ ಜೆಟಿಒ ಎಸ್‌.ವಿ.ಕುಪ್ಪಸ್ತ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಸೊಬರದ, ಉಪಾಧ್ಯಕ್ಷ ಈಶ್ವರಗೌಡ ತಿರಕನಗೌಡ್ರ, ಡಿ.ವೈ.ಕಾಡಪ್ಪನವರ, ಲೋಕಪ್ಪ ಕರಕೀಕಟ್ಟಿ, ಶಿವನಗೌಡ ಪಾಟೀಲ, ಎಸ್‌.ವೈ.ಮುಲ್ಕಿಪಾಟೀಲ, ಬಸಣ್ಣ ಕುಪ್ಪಸ್ತ, ರವೀಂದ್ರ ದೊಡಮನಿ, ಈಶಪ್ಪ ಪತ್ತಾರ, ಗುರುಶಾಂತಯ್ಯ ವಸ್ತದ, ನಜೀರಸಾಬ್‌ ಚಳ್ಳಮರದ, ಪ್ರವಿಣ ಸಂಗಳಶೆಟ್ಟರ, ಬಾಲಪ್ಪ ಮೂಲಿಮನಿ, ಬ್ರಹ್ಮಾನಂದ ಕಿತ್ತಲಿ, ಸದಾಶಿವಪ್ಪ ಮೆಣಸಗಿ, ಮುದಿವೀರಪ್ಪ ಕರಕಿಕಟ್ಟಿ ಹಾಗೂ ಯುವ ಸೈನಿಕರ ಗೆಳೆಯರ ಬಳಗ, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next