Advertisement

ಸಂಶೋಧನಾರ್ಥಿಗಳ ಸಹಾಯಧನ ಶೇ.20 ಏರಿಕೆ

12:30 AM Jan 31, 2019 | |

ಹೊಸದಿಲ್ಲಿ: ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನಾರ್ಥಿಗಳ ಬೇಡಿಕೆಗೆ ಮಣಿದಿರುವ ಕೇಂದ್ರ ಸರಕಾರ, ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಮಾಡುತ್ತಿರುವವರ ಸಹಾಯಧನವನ್ನು ಶೇ.20 ಏರಿಕೆ ಮಾಡಿದೆ. ಈ ಮೂಲಕ ಇದುವರೆಗೆ ಮಾಸಿಕ 25 ಸಾವಿರ ರೂ. ಸಹಾಯಧನ ಪಡೆಯುತ್ತಿದ್ದವರು ಇನ್ನು ಮುಂದೆ 31 ಸಾವಿರ ರೂ. ಪಡೆಯಲಿದ್ದಾರೆ. ಸೀನಿಯರ್‌ ರಿಸರ್ಚ್‌ ಫೆಲೋಶಿಪ್‌ ಮಾಡುತ್ತಿರುವವರಿಗೆ 35 ಸಾವಿರ ರೂ. ಸಿಗಲಿದೆ. ವಿಚಿತ್ರವೆಂದರೆ 2010ರ ನಂತರ ಸಂಶೋಧನಾರ್ಥಿಗಳ ಸಹಾಯಧನ ಏರಿಕೆ ಮಾಡೇ ಇರಲಿಲ್ಲ. ಆದರೆ, ಕೇಂದ್ರ ಸರಕಾರದ ಈ ನಿರ್ಧಾರವನ್ನು ತಿರಸ್ಕರಿಸಿರುವ ಸಂಶೋಧ ನಾರ್ಥಿಗಳು, ಈ ಏರಿಕೆ ಯಾವುದಕ್ಕೂ ಸಾಲುವುದಿಲ್ಲ ಎಂದಿ¨ªಾರೆ. ತಾವು ಬೇಡಿಕೆ ಇಟ್ಟಿದ್ದು ಜೆಆರ್‌ಎಫ್ಗೆ 50 ಸಾವಿರ, ಸಿಆರ್‌ಎಫ್ಗೆ 56 ಸಾವಿರ ರೂ. ನೀಡಬೇಕು ಎಂದು. ಆದರೆ, ಸರಕಾರ ನಮ್ಮ ಬೇಡಿಕೆಯನ್ನು ಪೂರ್ಣವಾಗಿ ಈಡೇರಿಸಿಲ್ಲ. ಹೀಗಾಗಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದಿದ್ದಾರೆ.

Advertisement

ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ  
ದೇಶದ ಎಲ್ಲಾ ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಯುಜಿಸಿ ಒಪ್ಪಿಗೆ ನೀಡಿದ್ದು,  ಪ್ರತಿ ಉಪನ್ಯಾಸಕ್ಕೆ 1500 ರೂ. ನಿಗದಿ ಮಾಡಿದ್ದು, ಮಾಸಿಕ 50 ಸಾವಿರ ರೂ. ಮೀರದಂತೆ ವೇತನ ನೀಡಬಹುದು ಎಂದಿದೆ. ಈ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಿದ್ದು, ಜ.28 ರಿಂದಲೇ ಅನ್ವಯವಾಗುವಂತೆ ಈ ನಿಯಮ ಜಾರಿ ಮಾಡಬೇಕೆಂದು ಸೂಚನೆ ನೀಡಲಾಗಿದೆ.  ಅಲ್ಲದೆ ಆಯ್ಕೆ ವಿಧಾನಗಳ ಬಗ್ಗೆಯೂ ಹೊಸ ಮಾರ್ಗ ಸೂಚಿಗಳನ್ನು ನೀಡಲಾಗಿದೆ. ಕೇವಲ ಅಂಗೀಕಾರವಾದ ಹುದ್ದೆಗಳಿಗೆ ಮಾತ್ರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು, ಒಂದು ವೇಳೆ ಹೆಚ್ಚು ಕೆಲಸವಿದ್ದರೆ ಅಂಗೀಕಾರವಾದ ಹುದ್ದೆಗಳ ಶೇ.20 ರಷ್ಟು ಹೆಚ್ಚುವರಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬಹುದು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next