Advertisement
ಏಳನೇ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾಗಿತ್ತು. ಹಾಗಾಗಿ ಶ್ಯಾಮ್ ರಂಗೀಲಾ ಅವರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರವೇ ನಾಮಪತ್ರ ಸಲ್ಲಿಸಿದ್ದರು. ಆದರೆ ಅಫಿಡವಿಟ್ ಸಲ್ಲಿಸದ ಕಾರಣ ಶ್ಯಾಮ್ ರಂಗೀಲಾ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ಹೇಳಲಾಗುತ್ತಿದೆ.
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಹಲವು ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಬಿಜೆಪಿ ಅಭ್ಯರ್ಥಿ ಪ್ರಧಾನಿ ಮೋದಿ ಅವರಲ್ಲದೆ, ಜನತಾ ಪಕ್ಷದ ವಿನಯ್ ಕುಮಾರ್ ತ್ರಿಪಾಠಿ, ಬಿಜೆಪಿಯ ಸುರೇಂದ್ರ ನಾರಾಯಣ್ ಸಿಂಗ್, ಸ್ವತಂತ್ರ ಅಭ್ಯರ್ಥಿಗಳಾದ ದಿನೇಶ್ ಕುಮಾರ್ ಯಾದವ್, ರೀನಾ ರೈ, ನೇಹಾ ಜೈಸ್ವಾಲ್, ಅಜಿತ್ ಕುಮಾರ್ ಜೈಸ್ವಾಲ್, ಅಶೋಕ್ ಕುಮಾರ್ ಪಾಂಡೆ-ಸ್ವತಂತ್ರ, ಸಂದೀಪ್ ತ್ರಿಪಾಠಿ ನಾಮಪತ್ರ ಸಲ್ಲಿಸಿದ್ದಾರೆ.
Related Articles
Advertisement