Advertisement

Kushtagi: ವಸತಿ ನಿಲಯ ವಿದ್ಯಾರ್ಥಿಗಳೊಂದಿಗೆ ಅಡುಗೆ ಸಹಾಯಕ ಕಿರಿಕ್

10:37 PM Feb 17, 2024 | Team Udayavani |

ಕುಷ್ಟಗಿ: ಇಲ್ಲಿನ‌ ತಹಶೀಲ್ದಾರ ಕಚೇರಿಂದ ಕೂಗಳತೆಯ ದೂರದಲ್ಲಿರುವ ಮೆಟ್ರಿಕ್ ನಂತರ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಸತಿ ಹೊರಗಿನವರ ಟಾರ್ಚರ್ ಗೆ ಹೆದರಿ ಪೊಲೀಸ್ ಠಾಣೆಯ ಮೊರೆ ಹೋದ ಘಟನೆ ಶನಿವಾರ ಸಂಜೆ ನಡೆದಿದೆ.

Advertisement

ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸದ್ಯ 75ರಿಂದ 100ರವರೆಗೆ ಮಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ.ನಾಲ್ವರು ಅಡುಗೆಯವರು, ಇಬ್ಬರು ಸಹಾಯಕರು, ಓರ್ವ ಮೇಲ್ವಿಚಾರಕರು ಸೇವೆಯಲ್ಲಿದ್ದಾರೆ. ಇತ್ತೀಚಿಗೆ ಸ್ಥಳೀಯ ಸಹಾಯಕ ಹಾಗೂ ವಿದ್ಯಾರ್ಥಿಗಳೊಂದಿಗೆ ಕಿರಿಕ್ ಶುರುವಾಗಿದೆ. ಆ ಕಿರಿಕ್ ಇಷ್ಟಕ್ಕೂ ಶಮನವಾಗದೇ ಅಡುಗೆ ಸಹಾಯಕನ ಸಂಬಂಧಿಕ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಟಾರ್ಚರ್ ನೀಡಲಾರಂಭಿಸಿದ್ದಾನೆ. ಇದರಿಂದ ಅಸಹನೀಯಗೊಂಡ ವಿದ್ಯಾರ್ಥಿಗಳು ಒಗ್ಗೂಡಿ ಈ ವಿಷಯವನ್ನು ಮೇಲ್ವಿಚಾರಕ ಹಾಗೂ ಪರಿಶಿಷ್ಟ ವರ್ಗದ ಕಲ್ಯಾಧಿಕಾರಿಯ ಗಮನಕ್ಕೆ ತಂದರೂ ಪ್ರಯೋಜನೆ ಆಗಿರಲಿಲ್ಲ.

ಅಡುಗೆ ಸಹಾಯಕ ಸಿಬ್ಬಂದಿಯ ಸಂಬಂಧಿಕ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆನ್ನುವುದು ವಿಧ್ಯಾರ್ಥಿಗಳ ಆರೋಪ. ಅಡುಗೆಯವರಿಗೆ ಸರಿಯಾಗಿ ಅಹಾರ ತಯಾರಿಸುತ್ತಿಲ್ಲ ಆಕ್ಷೇಪಕ್ಕೆ ವಸತಿ ನಿಕಯದ ಅಡುಗೆಯವರು ಹೊರಗಿನ ಸ್ಥಳೀಯ ವ್ಯಕ್ತಿಯನ್ನೇ ಬೆಂಬಲಿಸುತ್ತಿದ್ದಾರೆ. ಯಾವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಯಾವೂದೇ ರೀತಿಯಲ್ಲಿ ಅಟ್ಯಾಕ್ ಆಗಬಹುದೆಂಬ ಭೀತಿಗೆ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಆಗಮಿಸಿದ್ದರು.

ಪಿಎಸೈ ಮುದ್ದುರಂಗಸ್ವಾಮಿ ಅವರಲ್ಲಿ ವಾಸ್ತವ ಸ್ಥಿತಿ ಗಮನಕ್ಕೆ ತಂದ ವಿದ್ಯಾರ್ಥಿಗಳಿಗೆ ಪಿಎಸೈ ಮುದ್ದುರಂಗಸ್ವಾಮಿ ಅವರು, ಅಭಯ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಅಡುಗೆಯವರಿಗೆ, ಅಡುಗೆ ಸಹಾಯಕರಿಗೆ ಪರಿಶಿಷ್ಟ ವರ್ಗ ಕಲ್ಯಾಣ ಆಧಿಕಾರಿಯ ಸಮ್ಮುಖದಲ್ಲಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next