Advertisement
ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆ ಸಂಚಾರ ವ್ಯವಸ್ಥೆಯನ್ನು ಸಂಚಾರ ಠಾಣೆ ನೋಡಿಕೊಳ್ಳುತ್ತಿದ್ದು, ರಾ.ಹೆ.75ರ ಮೆಲ್ಕಾರ್ ಸಮೀಪದಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಬಾಡಿಗೆ ಕಟ್ಟಡವು ಸೋರುತ್ತಿದ್ದು, ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಟರ್ಪಾಲು ಬಳಸಬೇಕಾದ ಸ್ಥಿತಿ ಇದೆ.
ಸಂಚಾರ ಪೊಲೀಸ್ ಠಾಣೆ ಎಂದರೆ ಅದಕ್ಕೆ ಕಟ್ಟಡಕ್ಕಿಂತಲೂ ಹೆಚ್ಚಿನ ಸ್ಥಳವಕಾಶ ವಾಹನ ನಿಲುಗಡೆಗೆ ಬೇಕಾಗುತ್ತದೆ. ಅಪಘಾತಗಳು ನಡೆದಾಗ ವಾಹನಗಳನ್ನು ಠಾಣೆಗೆ ತಂದು ನಿಲ್ಲಿಸಬೇಕಿದ್ದು, ದ್ವಿಚಕ್ರ ವಾಹನದಿಂದ ಹಿಡಿದು ಬಸ್-ಲಾರಿಯನ್ನೂ ಠಾಣೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಅವುಗಳಿಗೆ ಹೆಚ್ಚಿನ ಜಾಗ ಬೇಕಾಗುತ್ತದೆ.
Related Articles
Advertisement
ಇದನ್ನೂ ಓದಿ:ಇನ್‌ಸ್ಟಾಗ್ರಾಂ ಡೌನ್‌ಲೋಡ್‌ಗೆ ಭಾರತವೇ ಫಸ್ಟ್
ಒಂದು ನಿವೇಶನ ಮಂಜೂರಾಗಿದೆ
ಪಾಣೆಮಂಗಳೂರು ಗೂಡಿನಬಳಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿದ್ದ ಪಶು ಇಲಾಖೆಯ ಹಳೆಯ ಕಟ್ಟಡದ ನಿವೇಶನ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ಮಂಜೂರಾಗಿತ್ತು. ಆದರೆ ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳ ಇಲ್ಲದೇ ಇರುವುದರಿಂದ ಅದು ಹಾಗೇ ಉಳಿದುಕೊಂಡಿದೆ. ಈ ನಿವೇಶನದಲ್ಲಿ ಪಾಳುಬಿದ್ದ ಕಟ್ಟಡವಿದ್ದು, ಜಾಗವು ಒತ್ತುವರಿಯಾಗುವ ಆತಂಕವೂ ಎದುರಾಗಿತ್ತು. ಪೊಲೀಸ್ ಇಲಾಖೆಯು ಆ ಜಾಗವನ್ನು ಸದ್ಬಳಕೆ ಮಾಡಿಕೊಂಡು ಪ್ರಸ್ತುತ ಪಾಳು ಬಿದ್ದ ಕಟ್ಟಡವನ್ನು ದುರಸ್ತಿ ಮಾಡುವ ಕಾರ್ಯ ಮಾಡಿದೆ. ಜತೆಗೆ ಬಂಟ್ವಾಳದ ಬಂದೋಬಸ್ತಿಗೆ ಆಗಮಿಸುವ ಕೆಎಸ್‌ಆರ್‌ಪಿ ಸಿಬಂದಿ ಆ ನವೀಕೃತ ಕಟ್ಟಡದಲ್ಲಿ ವಾಸ್ತವ್ಯ ಪಡೆಯುತ್ತಿದ್ದಾರೆ. ಮೊದಲಾದರೆ ಅವರು ಬಂಟ್ವಾಳ ಸುತ್ತಮುತ್ತಲಿನ ಸಭಾಂಗಣಗಳಲ್ಲಿ ವಾಸ್ತವ್ಯ ಹೂಡಬೇಕಿದ್ದು, ಅಲ್ಲಿ ಸಮಾರಂಭವಿದ್ದರೆ ಮತ್ತೂಂದಕ್ಕೆ ಹೋಗಬೇಕಾದ ಸ್ಥಿತಿ ಇತ್ತು. ಸಮಯ ತೆಗೆದುಕೊಳ್ಳಲಿದೆ
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಸೂಕ್ತವಾದ ನಿವೇಶನ ಸಿಗಬೇಕಿದ್ದು, ಅದರ ಬಳಿಕವೇ ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ನಿವೇಶನ ಅಂತಿಮಗೊಳಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
-ಹೃಷಿಕೇಶ್ ಭಗವಾನ್ ಸೋನಾವಣೆ,
ಪೊಲೀಸ್ ವರಿಷ್ಠಾಧಿಕಾರಿ, ದ.ಕ. -ಕಿರಣ್ ಸರಪಾಡಿ