Advertisement

ಹೊಸ ಸಂಸತ್‌ ಭವನದ ಮುಖ್ಯಭಾಗ ನಿರ್ಮಾಣ ಪೂರ್ಣ: ಸಿಇಒ ವಿನಾಯಕ್‌

10:57 AM Aug 29, 2022 | Team Udayavani |

ನವದೆಹಲಿ: ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ನೂತನ ಸಂಸತ್‌ ಭವನ ನಿರ್ಮಾಣ ಅಂತಿಮಹಂತಕ್ಕೆ ತಲುಪಿದೆ.

Advertisement

ಹೊಸ ಭವನದ ಮುಖ್ಯ ರಚನೆ ನಿರ್ಮಾಣ ಪೂರ್ಣವಾಗಿದೆ. ಈಗದರ ಒಳಭಾಗದಲ್ಲಿ ಅಂತಿಮಹಂತದ ಕೆಲಸಗಳು ನಡೆಯುತ್ತಿವೆ ಎಂದು ಟಾಟಾ ಪ್ರಾಜೆಕ್ಟ್ ಸಿಇಒ ವಿನಾಯಕ್‌ ಪೈ ಹೇಳಿದ್ದಾರೆ.

ನೂತನ ಭವನದಲ್ಲಿ ಭವ್ಯವಾದ ಸಂವಿಧಾನ ಮಂಟಪವಿರುತ್ತದೆ. ಅಲ್ಲಿ ಭಾರತದ ಪ್ರಜಾಪ್ರಭುತ್ವದ ಹೆಜ್ಜೆಗುರುತುಗಳನ್ನು ಬಿಂಬಿಸಲಾಗುತ್ತದೆ.

ಸಂಸತ್‌ ಸದಸ್ಯರಿಗೆ ಕುಳಿತುಕೊಳ್ಳಲು ಜಾಗ, ಒಂದು ಗ್ರಂಥಾಲಯ, ವಿವಿಧ ಸಮಿತಿಗಳಿಗೆ ಕೊಠಡಿಗಳು, ಊಟದ ಮನೆ, ವಾಹನ ನಿಲುಗಡೆಗೆ ವಿಶಾಲವಾದ ಜಾಗವನ್ನು ಬಿಡಲಾಗಿದೆ.

ಈ ಬಾರಿಯ ಚಳಿಗಾಲದ ಅಧಿವೇಶನ ಹೊಸಭವನದಲ್ಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next