Advertisement

ಭುವನೇಶ್ವರದಲ್ಲಿ ಕರ್ಲಾನ್‌ ಘಟಕಕ್ಕೆ ಶಿಲಾನ್ಯಾಸ

11:05 AM Jun 24, 2018 | |

ಬೆಂಗಳೂರು: ಭಾರತದ ಮುಂಚೂಣಿ ಮ್ಯಾಟ್ರೆಸ್‌, ಸೋಫಾ ಮತ್ತು ಪೀಠೊಪಕರಣಗಳ ತಯಾರಿಕಾ ಸಂಸ್ಥೆಯಾಗಿರುವ ಕರ್ಲಾನ್‌, ಒಡಿಶಾದ ಭುವನೇಶ್ವರದಲ್ಲಿ ಇತೀ¤ಚೆಗೆ ನೂತನ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕರ್ಲಾನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧಾಕರ್‌ ಪೈ ಅವರು, ನಮ್ಮ ಮ್ಯಾಟ್ರೆಸ್‌, ಸೋಫಾ ಮತ್ತು ಪೀಠೊಪಕರಣಗಳಿಗೆ ಕಳೆದ ಹಲವು ವರ್ಷಗಳಿಂದ ನಿರೀಕ್ಷೆ ಮೀರಿ ಬೇಡಿಕೆ ಬರುತ್ತಿದ್ದು, ಸಂಸ್ಥೆ ಪ್ರಗತಿಯತ್ತ ಸಾಗಿದೆ. ಪೂರ್ವ ಹಾಗೂ ಈಶಾನ್ಯ ಪ್ರದೇಶದಲ್ಲಿ ನಮ್ಮ ಎಲ್ಲ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಈ ಹೊಸ ಘಟಕ ಸ್ಥಾಪಿಸುತ್ತಿದ್ದೇವೆ. ಒಡಿಶಾ ಸರ್ಕಾರದ ಬೆಂಬಲದಿಂದಾಗಿ ನಮಗೆ ಸುಲಭವಾಗಿ ಭೂಮಿ ದೊರೆತಿದೆ. ಜತೆಗೆ ಮೂಲ ಸೌಕರ್ಯಗಳೂ ಸುಲಭವಾಗಿ ದೊರೆಯುವ ಕಾರಣ ನೂತನ ಘಟಕ ಸ್ಥಾಪನೆಗೆ ಭುವನೇಶ್ವರವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದರು.

150 ಕೋಟಿ ರೂ. ವೆಚ್ಚ: ನೂತನ ಘಟಕವನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈ ಹಣವನ್ನು ಕಂಪನಿ ತನ್ನ ಆಂತರಿಕ ಸಂಪನ್ಮೂಲಗಳಿಂದ ಹೂಡಿಕೆ ಮಾಡುತ್ತಿದೆ. ಈ ಹೊಸ ಘಟಕ 20 ಎಕರೆಗೂ ಅಧಿಕ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದು, 2019ರ ಮಾರ್ಚ್‌ ವೇಳೆಗೆ ಉತ್ಪನ್ನಗಳ ತಯಾರಿಕೆಯನ್ನು ಆರಂಭಿಸಲಿದೆ.

ಹೊಸ ಘಟಕದೊಂದಿಗೆ ಕರ್ಲಾನ್‌ ಭಾರತದಲ್ಲಿ ಒಟ್ಟು 10 ತಯಾರಿಕಾ ಘಟಕಗಳನ್ನು ಹೊಂದಿದಂತಾಗಲಿದೆ. ಇಲ್ಲಿ ಸಂಪೂರ್ಣವಾಗಿ ಆಟೋಮ್ಯಾಟಿಕ್‌ ಸ್ಪ್ರಿಂಗ್‌ ಮ್ಯಾಟ್ರೆಸ್‌ ತಯಾರಿಕಾ ಘಟಕ ತಲೆ ಎತ್ತಲಿದ್ದು, ದೇಶದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಕರ್ಲಾನ್‌ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಭುವನೇಶ್ವರದಲ್ಲಿ ಈ ಘಟಕ ಆರಂಭಿಸಲಾಗುತ್ತಿದೆ.

Advertisement

ಈ ಪ್ರದೇಶದಲ್ಲಿ ಕರ್ಲಾನ್‌ ಪ್ರಸ್ತುತ 157 ಮಳಿಗೆಗಳನ್ನು ಹೊಂದಿದ್ದು, 2019ರ ಮಾರ್ಚ್‌ ವೇಳೆಗೆ ಇವುಗಳ ಸಂಖ್ಯೆ 300ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ದೇಶಾದ್ಯಂತ 10,000 ಕ್ಕೂ ಹೆಚ್ಚು ಡೀಲರ್‌ಗಳ ಜಾಲ, 72 ಶಾಖೆಗಳು ಮತ್ತು 9 ಗೋದಾಮುಗಳನ್ನು ಕರ್ಲಾನ್‌ ಹೊಂದಿದೆ. ಕರ್ನಾಟಕ, ಒಡಿಶಾ, ಮಧ್ಯಪ್ರದೇಶ, ಉತ್ತರಾಂಚಲ ಮತ್ತು ಗುಜರಾತ್‌ ರಾಜ್ಯಗಳಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next