Advertisement
ನಾಗ್ಪುರದಲ್ಲಿ ನಡೆದ ಅಖೀಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ರವಿವಾರ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ನಾಜಿ ಜೋಷಿ, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಿಶ್ಚಿತ. ಅದರ ಬಗ್ಗೆ ನಿರ್ಧಾರವನ್ನೂ ಕೈಗೊಂಡಾಗಿದೆ. ಸುಪ್ರೀಂಕೋರ್ಟ್‌ನಿಂದ ನಮ್ಮ ಪರ ವಾಗಿಯೇ ತೀರ್ಪು ಬರುವ ವಿಶ್ವಾಸವಿದೆ.
ಒಮ್ಮತ ಮೂಡುವುದು ಕಷ್ಟ ಎಂದು ಅನುಭವಕ್ಕೆ ಬಂದಿದೆ’ ಎಂದಿದ್ದಾರೆ. ಕರ್ನಾಟಕದ ಇಬ್ಬರಿಗೆ ನಂ.3 ಸ್ಥಾನ
ಆರೆಸ್ಸೆಸ್‌ನ 3ನೇ ಸ್ಥಾನವಾದ ಸಹಸರಕಾರ್ಯ ವಾಹ ಹುದ್ದೆಗೆ ರವಿವಾರ ಬೆಂಗಳೂರಿನ ಮುಕುಂದ ಸಿ.ಆರ್. ಅವರನ್ನು ನೇಮಕ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಈ ಸ್ಥಾನ ದೊರೆತಂತಾಗಿದೆ. ಈಗಾಗಲೇ ದತ್ತಾತ್ರೇಯ ಹೊಸಬಾಳೆ ಅವರು ಸಹಸರ ಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಮನಮೋಹನ್ ವೈದ್ಯ ಅವರನ್ನೂ ಸಹಸರ ಕಾರ್ಯವಾಹರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಒಟ್ಟು 6 ಮಂದಿ ಜಂಟಿ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡಂತಾಗಿದೆ. ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯ ವಾಹರಾಗಿ ಡಾ. ಜಯಪ್ರಕಾಶ್, ಸಹಕಾರ್ಯ ವಾಹರಾಗಿ ಪಿ.ಎಸ್.ಪ್ರಕಾಶ್, ಪ್ರಚಾರಕರಾಗಿ ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಉತ್ತರ ಪ್ರಾಂತ್ಯಕ್ಕೆ ಪ್ರಚಾರಕರಾಗಿ ಸುಧಾಕರ್, ಸಹ ಪ್ರಚಾರಕರಾಗಿ ನರೇಂದ್ರ ನೇಮಕ ಗೊಂಡಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣಕ್ಕೆ ಕ್ಷೇತ್ರೀಯ ಸಹಕಾರ್ಯವಾಹರಾಗಿ ಎನ್.ತಿಪ್ಪೇಸ್ವಾಮಿ, ಕ್ಷೇತ್ರ ಸಹ ಪ್ರಚಾರಕರಾಗಿ ಸುಧೀರ್, ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಆಗಿ ಬಿ.ವಿ. ಶ್ರೀಧರಸ್ವಾಮಿ ನೇಮಕಗೊಂಡಿದ್ದಾರೆ.