ರಾಯಚೂರು: ರಾಮಮಂದಿರ ನಿರ್ಮಾಣಕ್ಕೂ, ಲೋಕಸಭೆ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ವಿಷಯವನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳಬಾರದು ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮನ ಜನ್ಮಭೂಮಿ. ಪುರಾಣಗಳಲ್ಲೂ ಇದರ ಉಲ್ಲೇಖವಿದೆ. ಹೀಗಾಗಿ, ಶ್ರೀರಾಮ ಮಂದಿರವನ್ನು ಅಲ್ಲಿಯೇ ನಿರ್ಮಿಸುವುದು ಸೂಕ್ತ. ಶ್ರೀರಾಮ ಮಂದಿರ ನಿರ್ಮಾಣದ ಹಲವು ವಿಚಾರಗಳು ನ್ಯಾಯಾಲಯದಲ್ಲಿವೆ.
ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರ ಎಲ್ಲ ಧರ್ಮಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲವಿಲ್ಲದಂತೆ ಮಂದಿರ ನಿರ್ಮಿಸಲಿ. ಯಾವುದೇ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೆ ಎಲ್ಲರ ಸಹಮತದೊಂದಿಗೆ ದೇವಾಲಯ ನಿರ್ಮಿಸಬೇಕು. ವಿಧರ್ಮಿಯರಾದ ಮುಸ್ಲಿಮರು ಕೂಡ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಮಂತ್ರಾಲಯದಲ್ಲಿನ ಗೋ ಶಾಲೆಯಿಂದ ಮಠ ಯಾವುದೇ ಪ್ರತಿಫಲಾಪೇಕ್ಷೆ ಪಡುತ್ತಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಗೋರಕ್ಷಣೆ ಶಾಲೆ ಮಾಡಿಲ್ಲ. ಹಂಪಿ ವಿಜಯ ವಿಠuಲ ದೇವಸ್ಥಾನದ ಎಡಭಾಗದಲ್ಲಿ ಶ್ರೀ ಸುರೇಂದ್ರಮಠ ಇದೆ ಎಂಬುದು ತಿಳಿದು ಬಂದಿದೆ.
ಹಂಪಿ ಪ್ರಾಧಿಕಾರ ಹಾಗೂ ಯುನೆಸ್ಕೊ ಅದನ್ನು ರಕ್ಷಣಾ ಪ್ರದೇಶವನ್ನಾಗಿಸಲು ಸೂಚಿಸಿವೆ. ಸುರೇಂದ್ರಮಠದಲ್ಲಿ ಉತVನನ ಸಂದರ್ಭದಲ್ಲಿ ಚಿಕ್ಕ ಬೃಂದಾವನ, ಪೂಜಾ ಸಾಮಗ್ರಿಗಳು, ಪತ್ರಗಳು ಸಿಕ್ಕಿವೆ ಎಂದರು.