Advertisement

ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರು ಓದಿ, ಅರಿತುಕೊಳ್ಳಬೇಕು: ನಾಗಮೋಹನ್‌ ದಾಸ್‌

09:46 PM Jun 09, 2022 | Team Udayavani |

ಬೆಂಗಳೂರು: ಭಾರತ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರು ಓದಿ, ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳವುದರ ಮೂಲಕ ಸಂವಿಧಾನವನ್ನು ಸಂರಕ್ಷಿಸಬೇಕು ಎಂದು ನಿವೃತ್ತ ನ್ಯಾಯಾಧೀಶ ಎಚ್‌.ಎನ್‌.ನಾಗಮೋಹನ್‌ ದಾಸ್‌ ತಿಳಿಸಿದರು.

Advertisement

ಕರ್ನಾಟಕ ದಲಿತ ಸಂಘರ್ಷ ಸಮಿತಿ  ಆಯೋಜಿಸಿದ್ದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪ ಅವರ 84ನೇ ಜನ್ಮ ದಿನಾಚರಣೆ ಪ್ರಯುಕ್ತ ‘ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೊ.ಬಿ.ಕೃಷ್ಣಪ್ಪ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಲ್ಲಿ  ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರೊಟ್ಟಿ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದೆ. ಆಗ ಅವರ ಸರಳ, ದಿಟ್ಟ ನಡೆ-ನುಡಿ ನಮಗೆಲ್ಲಾ ಸ್ಪೂರ್ತಿ ಎಂದು ಕೃಷ್ಣಪ್ಪ ಅವರೊಂದಿಗೆ ಕಳೆದ ದಿನಗಳನ್ನು ಮೆಲಕು ಹಾಕಿದರು.

ಯಾವುದೇ ಒಂದು ಸಮಾಜ ಅಥವಾ ಜನಾಂಗಕ್ಕೆ ನಾಯಕರಾದವರು, ಅವರ ಅನುಯಾಯಿಗಳಿಗೆ  ಉತ್ತಮ ಮಾರ್ಗವನ್ನು ತೋರಿಸುವುದರ ಜತೆಗೆ ಮುನ್ನಡೆಸುವ ಗುಣ ಹೊಂದಿರಬೇಕು. ಆಗ ಮಾತ್ರ ಸಮಾಜ ಅಥವಾ ಸಮುದಾಯವನ್ನು ಮೇಲ್ದರ್ಜೆಗೆ ತರಲು ಸಾಧ್ಯ. ಹಾಗೂ ದಲಿತರ ಮೇಲಾಗುವ ದೌರ್ಜನ್ಯ, ಮೀಸಲಾತಿ, ವೈದ್ಯಕೀಯ, ಶಿಕ್ಷಣದಲ್ಲಿ ಅವ್ಯವಸ್ಥೆ ಒಂದು ಕಡೆಯಾದರೆ, ಮತ್ತೂಂದೆಡೆ ಭಯೋತ್ಪಾದನೆ, ಭ್ರಷ್ಟಾಚಾರ, ದಿವಾಳಿಕರಣದ ಸಮಸ್ಯೆಗಳು ತಾಂಡವವಾಡುತ್ತಿವೆ. ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಸರಿಸುವುದೇ ಇದಕ್ಕೆಲ್ಲ ಪರಿಹಾರ. ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನವನ್ನು ಪ್ರತಿ ತಾಲೂಕು-ಜಿಲ್ಲಾ ಸೇರಿದಂತೆ ದೇಶಾಂದ್ಯಂತ ನಡೆಯಬೇಕು ಹಾಗೂ ಕೇವಲ ಒಂದು ದಿನಕ್ಕೆ ಸೀಮಿತವದೇ ಪ್ರತಿನಿತ್ಯವೂ ಸಂಕಲ್ಪ ದಿನವಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನಟರಾಜ್‌ ಹುಳಿಯಾರ್‌, ದಸಂಸ ಉಪಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next