Advertisement

ಭಾರತ ಸಂವಿಧಾನ ಶ್ರೇಷ್ಠ: ಶಾಸಕ ಕುಮಾರಸ್ವಾಮಿ

09:29 AM Jan 27, 2019 | Team Udayavani |

ಸಕಲೇಶಪುರ: ದೇಶದಲ್ಲಿ ಸಂವಿಧಾನವನ್ನು ಜಾರಿಗೆ ಮಾಡಿದ್ದರಿಂದ ಭಾರತ ದೇಶ ಬೇರೆಲ್ಲಾ ದೇಶಗಳಿಗಿಂತ ಸುಭದ್ರವಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದ ಸುಭಾಷ್‌ ಮೈದಾನದಲ್ಲಿ 70ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನವನ್ನು ನಾವು ಅಳ ವಡಿಸಿಕೊಂಡ ನಂತರ ಮೇಲು, ಕೀಳು, ಜಾತಿ, ಧರ್ಮಗಳ ಅಂತರ ಕಡಿಮೆಯಾ ಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ರಾಜ್ಯಗಳ ನಡುವೆ ಪರಸ್ಪರ ಪೈಪೋಟಿ ನಡೆಯುತ್ತಿದ್ದು, ಈ ಪೈಪೋಟಿಯನ್ನು ತೊಡೆದು ಹಾಕಿ ದೇಶ ಮೊದಲು ಎಂಬ ಭಾವನೆಯನ್ನು ಅಳ ವಡಿಸಿಕೊಳ್ಳಬೇಕು. ಇದರಿಂದ ದೇಶ ಹೆಚ್ಚು ಮುಂದುವರಿಯಲು ಸಹಕಾರಿ ಯಾಗುತ್ತದೆ ಎಂದರು.

ದೇಶದಲ್ಲಿ ಸಂವಿಧಾನ ಜಾರಿಗೆ ಬಂದು ಸುಮಾರು 70 ವರ್ಷಗಳಾಗು ತ್ತಿದೆ. ಇದರಿಂದ ದೇಶದಲ್ಲಿ ಹಲವು ಬದಲಾವಣೆಯಾಗಿದೆ. ದೇಶಕ್ಕಾಗಿ ತ್ಯಾಗ ಮಾಡುವ ಪ್ರತಿಜ್ಞೆಯೊಂದಿಗೆ ಗಣ ರಾಜ್ಯೋತ್ಸವವನ್ನು ಸಂಭ್ರಮಿ ಸೋಣ ಎಂದರು.

ಉಪ ವಿಭಾಗಾಧಿಕಾರಿ ಗಿರೀಶ್‌ ನಂದನ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ದೇಶದಲ್ಲಿ ರಾಜರ ಆಡಳಿತ ವಿತ್ತು. ಆದ್ದರಿಂದ ಎಲ್ಲರನ್ನೂ ದೇಶದಲ್ಲಿ ಒಂದೂಗೂಡಿಸಲು ಸಂವಿಧಾನದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಸಂವಿಧಾನವನ್ನು ರಚಿಸಿ ಎಲ್ಲರನ್ನೂ ಒಗ್ಗೂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.ತಾಪಂ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಉದಯ್‌, ತಹಶೀಲ್ದಾರ್‌ ನಾಗ ಭೂಷಣ್‌, ಪುರಸಭಾ ಮುಖ್ಯಾಧಿಕಾರಿ ವಿಲ್ಸನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next