Advertisement
ನಗರದ ಜೂನಿಯರ್ ಕಾಲೇಜು ರಸ್ತೆಯಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಮಹಾಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣ ದಿನಾಚರಣೆಯಲ್ಲಿ ಮಾತನಾಡಿದಅವರು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮುದಾಯಿಕ ಬದುಕಿಗೆ ಧಕ್ಕೆಯಾಗದ ಹಾಗೆ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಎಲ್ಲರಿಗೂ ನೀಡಿದೆ.
Related Articles
Advertisement
ಯಾಗಲು ಸಾಧ್ಯವಿಲ್ಲ ಎಂಬ ಅರಿವು ಡಾ. ಅಂಬೇಡ್ಕರ್ ಅವರಿಗೆ ಸ್ಪಷ್ಟವಾಗಿ ಇತ್ತು. ಆ ಕಾರಣಕ್ಕೆ ಭಾರತ ಸಂವಿಧಾನ ಮಹಿಳೆ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಎಲ್ಲಾ ಸಮುದಾಯ ಗಳನ್ನು ಒಳಗೊಳ್ಳುವ ಒಂದು ಕಾರ್ಯಸೂಚಿ ಯಾಗಿದೆ ಎಂದರು.
ಸಂವಿಧಾನ ಬದಲಾವಣೆ ಹುನ್ನಾರ: ದಲಿತ ಸಂಘಟನೆಗಳ ಮಹಾಒಕ್ಕೂಟ ಅಧ್ಯಕ್ಷ ಎಂ. ಜಗದೀಶ್ ಮಾತನಾಡಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ನಮ್ಮ ಸಂವಿಧಾನವೇ ಕಾರಣ.ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದ ತತ್ವಗಳು ಅನುಮಾನಾಸ್ಪದವಾಗಿ ಕಾಡುತ್ತಿವೆ. ಇಂದಿಗೂ ಸಂವಿಧಾನದ ಆಶಯ ಅನುಷ್ಠಾನಗೊಳಿಸದೆ, ಬದಲಾವಣೆಯ ಹುನ್ನಾರದ ಮಾತುಕೇಳುತ್ತಿದ್ದೇವೆ. ಇದು ಅಪಾಯಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಶಿವಪ್ರಕಾಶ್, ಜಿಲ್ಲಾ ಜಾಗೃತಿ ಉಪ ಸಮಿತಿ ಸದಸ್ಯಗುಡ್ಡೆ ವೆಂಕಟೇಶ್, ಕೆಪಿಸಿಸಿ ಎಸ್ಸಿ, ಎಸ್ಟಿ ವಿಭಾಗ ಸದಸ್ಯಶಿವಲಿಂಗಯ್ಯ, ಭಾರತೀಯ ಬೌದ್ಧ ಮಹಾ ಸೊಸೈಟಿಯ ಜಿಲ್ಲಾಧ್ಯಕ್ಷ ಚಿಕ್ಕವೆಂಕಟಯ್ಯ, ಯುವಮುಖಂಡ ಗೋಪಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೋತ್ತಿಪುರ ಗೋವಿಂದ, ಎಸ್ಸಿ, ಎಸ್ಟಿಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಎಚ್.ವೆಂಕಟೇಶ್, ಪೌರ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಲಿಂಗರಾಜು,ಸಫಾಯಿ ಕರ್ಮದ ಸಂಘದ ಮಾಜಿ ಅಧ್ಯಕ್ಷದೇವೆಂದ್ರ,ವನವಾಸಿ ಸಂಘದ ಅಧ್ಯಕ್ಷ ರಾಜು,ಮುಖಂಡ ರಮೇಶ್, ಡಿಫೋ ವೆಂಕಟೇಶ್, ಯುವಉದ್ಯಮಿ ಜನಾರ್ಧನ್, ದಲಿತ ಮುಖಂಡ ಬನ್ನಿಕುಪ್ಪೆ ರಮೇಶ್, ಆಟೋ ಶಿವರಾಜು, ಲಿಂಗರಾಜು ಗಾಂಧಿನಗರ ಮತ್ತಿತರರು ಇದ್ದರು.