Advertisement
ಪದಾಧಿಕಾರಿ ಪಟ್ಟಿ ಬಿಡುಗಡೆಗೂ ಮೊದಲು ಎಲ್ಲ ನಾಯಕರಿಂದ ಪಟ್ಟಿ ಪಡೆದುಕೊಂಡಿ ರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಕೆ.ಸಿ. ವೇಣುಗೋಪಾಲ ಯಾರ ಜತೆಗೂ ಚರ್ಚಿಸದೆ ತಮಗಿಷ್ಟ ಬಂದ ವರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್, ಇಂಧನ ಸಚಿವ ಹಾಗೂ ಚುನಾ ವಣ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನಗೊಂಡಿ ದ್ದಾರೆ ಎಂದು ಹೇಳಲಾಗಿದೆ.
ತೀವ್ರ ಅತೃಪ್ತಿ ವ್ಯಕ್ತಪಡಿಸಿ ದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಕುರಿತು ರಾಹುಲ್ ಗಾಂಧಿ ಗಮನಕ್ಕೂ ತರಲಾಗು ವುದು ಎಂದು ವೇಣು ಗೋಪಾಲ ಅವರಲ್ಲಿ ಹೇಳಿದ್ದಾರೆನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಎಸ್.ಆರ್. ಪಾಟೀಲ್ 10 ಮಂದಿಯ ಹೆಸರು ಶಿಫಾರಸು ಮಾಡಿ ಪಟ್ಟಿ ಕೊಟ್ಟಿದ್ದರೆ, ಅವರಲ್ಲಿ ಕೇವಲ ಇಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಡಿ.ಕೆ. ಶಿವಕುಮಾರ್ ತನ್ನ ಬೆಂಬಲಿಗರ 50 ಮಂದಿಯ ಹೆಸರು ಶಿಫಾರಸು ಮಾಡಿದ್ದರೆ, ಅವರಲ್ಲಿ ಕೇವಲ ಐದು ಮಂದಿಗೆ ಮಾತ್ರ ಸ್ಥಾನ ನೀಡಲಾಗಿದೆ. ಇನ್ನು ಕೆಪಿಸಿಸಿ ಇನ್ನೋರ್ವ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ 35 ಜನರ ಪಟ್ಟಿಯಲ್ಲಿ ಐವರನ್ನು ಮಾತ್ರ ಆಯ್ಕೆ ಮಾಡಲಾಗಿದೆ.
Related Articles
Advertisement
ಸಂಸದ ಮುನಿಯಪ್ಪ ದೂರು: ಸಂಸದ ಕೆ.ಎಚ್. ಮುನಿಯಪ್ಪ ಕೂಡ ಈ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಆಯ್ಕೆಯಾಗಿರುವ 171 ಜನರಲ್ಲಿ 100 ಜನರು ಬೆಂಗಳೂರಿ ನವರೇ ತುಂಬಿಕೊಂಡಿದ್ದಾರೆ. ಇದರಿಂದ ಪಕ್ಷ ಕಟ್ಟಲು ಹೇಗೆ ಸಾಧ್ಯವಾಗುತ್ತದೆ. ದಲಿತರಲ್ಲಿ ಬಲಗೈ ಪಂಗಡಕ್ಕೆ 12 ಜನರಿಗೆ ಸ್ಥಾನ ನೀಡಲಾಗಿದ್ದು, ಎಡಗೈ ಪಂಗಡಕ್ಕೆ ಕೇವಲ 5 ಸ್ಥಾನ ನೀಡಲಾಗಿದೆ. ಈ ರೀತಿಯ ತಾರತಮ್ಯ ಮಾಡಿದರೆ, ಸಮುದಾಯದಲ್ಲಿ ಒಡಕುಂಟಾಗುತ್ತದೆ. ಶೀಘ್ರವೇ ಈ ತಾರತಮ್ಯ ಪರಿಹರಿಸುವಂತೆ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಶಾಸಕರು ಕೆಂಡಾ ಮಂಡಲ: ಪದಾಧಿಕಾರಿಗಳ ಪಟ್ಟಿಯಿಂದ ತಮ್ಮನ್ನು ಕೈ ಬಿಟ್ಟಿರುವ ಬಗ್ಗೆ ಅನೇಕ ಶಾಸಕರು ಕೆಂಡಾ ಮಂಡಲರಾಗಿದ್ದಾರೆ ಎನ್ನಲಾಗಿದೆ. ಶಾಸಕರಿಲ್ಲದೇ ಪಕ್ಷವನ್ನು ಹೇಗೆ ಕಟ್ಟುತ್ತಾರೆ ಎಂದು ಅನೇಕ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಎನ್.ಎಸ್. ಭೋಸರಾಜ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ರುವ ಗೋವಿಂದರಾಜ್, ಕೆ.ಸಿ. ಕೊಂಡಯ್ಯ ಅವರನ್ನು ಉಳಿಸಿಕೊಂಡು ಶಾಸಕರನ್ನು ದೂರವಿರಿಸಿದ ಬಗ್ಗೆ ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವ ರಾಜ್, ಮುನಿರತ್ನ, ಎಚ್.ಎಂ. ರೇವಣ್ಣ, ಮಾಲಿಕಯ್ಯ ಗುತ್ತೇದಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೂಂದು ಪಟ್ಟಿ ?: ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವ ಲಕ್ಷಣ ಕಂಡು ಬರುತ್ತಿರುವುದರಿಂದ ಮುನಿಸಿಕೊಂಡ ನಾಯಕರನ್ನು ಸಮಾಧಾನ ಪಡಿಸಲು ಮತ್ತೂಂದು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸುಮಾರು 25 ರಿಂದ 30 ಜನರ ಹೊಸ ಪಟ್ಟಿಯನ್ನು ಮಾಡಿ, ಎಲ್ಲ ನಾಯಕರನ್ನು ಸಮಾಧಾನಗೊಳಿಸುವ ಪ್ರಯತ್ನಕ್ಕೆ ಪರಮೇಶ್ವರ ಹಾಗೂ ಕೆ.ಸಿ. ವೇಣುಗೋಪಾಲ್ ಮುಂದಾಗುವ ಸಾಧ್ಯತೆ ಇದೆ.