Advertisement

ಅಲ್ಪಸಂಖ್ಯಾಕರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡ ಕಾಂಗ್ರೆಸ್‌: ಜೀವಿಜಯ

07:50 AM May 04, 2018 | |

ಸೋಮವಾರಪೇಟೆ:  ಜಿಲ್ಲೆಯ ಅಲ್ಪಸಂಖ್ಯಾಕರು ಕಾಂಗ್ರೆಸ್‌ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ಹಾಕಿದಂತೆ ಎಂದು ಮಾಜಿ ಸಚಿವ ಹಾಜಖೀ ಮಡಿಕೇರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಿ.ಎ. ಜೀವಿಜಯ ಆರೋಪಿಸಿದರು.

Advertisement

ಪಕ್ಷದ ವತಿಯಿಂದ ಪಟ್ಟಣದ ಜೇಸಿ ವೇದಿಕೆಯಲ್ಲಿ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಳೆದ ಇಪ್ಪತ್ತ ವರ್ಷಗಳಲ್ಲಿ ಇಲ್ಲಿನ ಬಿಜೆಪಿ ಶಾಸಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸದೆ, ಸುಳ್ಳು ಪ್ರಚಾರದಲ್ಲೆ ವರ್ಷಗಳನ್ನು ಕಳೆದರು. ನಾನು ಸಚಿವ ಹಾಗೂ ಶಾಸಕನಾಗಿದ್ದಾಗ ಒಂದು ವರ್ಷ ದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿ ಗಳು, ಹಾಲಿ ಶಾಸಕ ಇಪ್ಪತ್ತು ವರ್ಷಗಳಲ್ಲಿ ಮಾಡಲಿಲ್ಲ ಎಂದು ದೂರಿದರು.ರಾಜ್ಯದ ಜನತೆ ಪ್ರಾದೇಶಿಕ ಪಕ್ಷದ ಆವಶ್ಯಕತೆಯನ್ನು ಮನಗಂಡಿದ್ದಾರೆ. ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಆಡಳಿತದಲ್ಲಿ ಯಶಸ್ಸು ಪಡೆದಿದೆ. ಪ್ರಾದೇಶಿಕ ಪಕ್ಷಗಳ ಆಡಳಿತದ ಅವಧಿ ಯಲ್ಲಿ ಎಲ್ಲ ಜನತೆಗೂ ಸಮಾನವಾಗಿ ಬದುಕುವ ಅವಕಾಶವನ್ನು ಕಲ್ಪಿಸಿದೆ. ಆದರೆ ಇನ್ನಿತರ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾಕರು ಸೇರಿದಂತೆ ಹಿಂದುಳಿದ ವರ್ಗಗಳ ಬದುಕುವ ಹಕ್ಕನ್ನು ಕಸಿದುಕೊಂಡಿದೆ.

ಅಲ್ಪಸಂಖ್ಯಾಕ‌ರನ್ನು ಕೇವಲ ಮತಬ್ಯಾಂಕ್‌ಗೊàಸ್ಕರ ಆಶ್ರಯಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ತಲಾ ಐದು ವರ್ಷ ಆಡಳಿತ ನಡೆಸಿದ್ದರೂ, ಜನ ಸಾಮಾನ್ಯರು, ರೈತರು, ಶೋಷಿತರ ಬದುಕಿಗೆ ಬೆಳಕನ್ನು ನೀಡಲಿಲ್ಲ. ಆದರೆ ಕೇವಲ ಇಪ್ಪತ್ತು ತಿಂಗಳು ಆಡಳಿತ ನಡೆಸಿದ ಕುಮಾರಸ್ವಾಮಿಯವರು ಆಡಳಿತ ವೈಖರಿಯನ್ನು ಪ್ರತಿ ಮನೆ ಮನೆಯಲ್ಲೂ ಮಾತನಾಡುತ್ತಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ. 

ಜೀವಿಜಯರವರಿಗೆ ವಯಸ್ಸಾಗಿದೆ ಎಂದು ಪ್ರತಿಪಕ್ಷದವರು, ಎಲ್ಲಾ ಸಭೆಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ವಯಸ್ಸಿನಲ್ಲಿ ಜೀವಿಜಯ ಯಾರ ಮನೆಗು ಹೆಣ್ಣು ಕೇಳಲು ಹೋಗಲಿಲ್ಲ. ಬದಲಾಗಿ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ವಿಧಾನಸೌಧಕ್ಕೆ ತೆರಳಲು ಮತ ಯಾಚನೆ ಮಾಡುತ್ತಿದ್ದೇನೆ ಎಂದು ಮಾರ್ಮಿಕವಾಗಿ ಅಭಿಪ್ರಾಯಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮಡಿಕೇರಿ ಕ್ಷೇತ್ರೀಯ ಸಮಿತಿ ಅಧ್ಯಕ್ಷ ಎಚ್‌.ಆರ್‌.ಸುರೇಶ್‌ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಬಿಜೆಪಿ ಪಕ್ಷದವರೇ ಗುರುತಿಸಿ ಕಾಂಗ್ರೆಸ್‌ ಹೆ„ಕಮಾಂಡಿಗೆ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ವಲಯದಲ್ಲಿಯೇ ಮಾತನಾಡುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡದ ಕ್ಷೇತ್ರದ ಶಾಸಕರನ್ನು ಮತ್ತೂಮ್ಮೆ ಆಯ್ಕೆ ಮಾಡುವುದು ಸರಿಯಲ್ಲ. ಅಭಿವೃದ್ಧಿ ಕುರಿತು ಶಾಸಕರಲ್ಲಿ ಸಮಜಾಯಿಸಿಕೆ ಕೇಳಿದರೆ ಸೋಮವಾರಪೇಟೆ ಕ್ಷೇತ್ರದವರು ಕಳೆದ ಬಾರಿ ನನಗೆ ಮತ ನೀಡಲಿಲ್ಲ. ಹೀಗಾಗಿ ಅಭಿವೃದ್ಧಿಪಡಿಸಲು ಮುಂದಾಗಲಿಲ್ಲ ಎಂದು ಹೇಳುತ್ತಾರೆ ಎಂದು ದೂಷಿಸಿದರು. 

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಟ್ಟರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್‌, ಯುವ ಜನತಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಲ್‌. ವಿಶ್ವ, ರಾಜ್ಯ ಸಮಿತಿ ಸದಸ್ಯರಾದ ಷರೀಫ್‌, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಇಸಾಖ್‌ಖಾನ್‌, ಮುಖಂಡರಾದ ಎಚ್‌.ಬಿ. ಜಯಮ್ಮ, ಕೆಎಂಬಿ ಗಣೇಶ್‌, ಜಾನಕಿ ವೆಂಕಟೇಶ್‌, ಎಸ್‌.ಎಂ. ಡಿ’ಸಿಲ್ವಾ ಮತ್ತಿತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next