ಗುತ್ತಿರುವ ಹಾನಿಯ ಬಗ್ಗೆ ನಿರೀಕ್ಷೆಯಂತೆ ಸಿಎಂ-ಡಿಸಿಎಂ ಮುಂದೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Advertisement
ಒಂದೆಡೆ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಅದಕ್ಕೆ ಸಂಬಂಧಿಸಿ ಸಚಿವರೊಬ್ಬರ ತಲೆದಂಡ, ಬೆನ್ನಲ್ಲೇ ಮುಡಾ ಹಗರಣ ಪಡೆದುಕೊಳ್ಳುತ್ತಿರುವ ತಿರುವು, ಇದರ ಮಧ್ಯೆ ಸಿಎಂ ತವರು ಜಿಲ್ಲೆ ಮೈಸೂರಿಗೆ ವಿಪಕ್ಷಗಳ ಪಾದಯಾತ್ರೆ ತಯಾರಿ; ಈ ಎಲ್ಲ ಬೆಳವಣಿಗೆಗಳ ನಡುವೆ ದಿಲ್ಲಿಗೆ ಬರುವಂತೆ ಸಿಎಂ-ಡಿಸಿಎಂಗೆ ಬುಲಾವ್ ಬಂದಿತ್ತು. ಮಂಗಳವಾರ ಇಬ್ಬರೂ ನಾಯಕರು ಹೈಕಮಾಂಡ್ ಭೇಟಿಯಾಗಿದ್ದಾರೆ.
Related Articles
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ 9 ಸ್ಥಾನಕ್ಕೆ ಸೀಮಿತ ಆಗಬೇಕಾಯಿತು. ಪಕ್ಷದಲ್ಲಿ ಒಳ ಏಟು, ಕೊನೆಯ ಕ್ಷಣದಲ್ಲಿ ವಿಪಕ್ಷಗಳ ಮೈತ್ರಿ ಹಾಗೂ ಅವುಗಳ ಸಂಘಟಿತ ಹೋರಾಟ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿತು. ಹಾಗೆಂದು ಇದೇನೂ ಕಳಪೆ ಅಲ್ಲ. ಕೇವಲ ಒಂದು ಸ್ಥಾನದಿಂದ ಒಂಭತ್ತಕ್ಕೆ ನಾವು ಏರಿಕೆಯಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥನೆ ನೀಡಿದರು ಎನ್ನಲಾಗಿದೆ.
Advertisement
ಹಗರಣಗಳೇ ಇಲ್ಲದಿದ್ದರೂ ಸುಳ್ಳು ಆರೋಪಗಳ ಮೂಲಕ ವಿಪಕ್ಷಗಳು ಹುಯಿಲೆಬ್ಬಿಸುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ಮುಡಾದಲ್ಲಿ ನಿವೇಶನಗಳನ್ನು ಪಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ಸಮಜಾಯಿಷಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಹೈಕಮಾಂಡ್, ದಿಲ್ಲಿಯಿಂದಲೇ ವಿಪಕ್ಷಗಳಿಗೆ ಸೂಚನೆ ಬಂದಿದೆ. ಅದರಂತೆ ಇಲ್ಲದಿರುವುದನ್ನೂ ಇದೆ ಎಂಬಂತೆ ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ. ಈಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳ ಕೊನೆಯ 2 ದಿನಗಳ ಹೋರಾಟ, ಅಹೋರಾತ್ರಿ ಧರಣಿಯಂತಹ ತಂತ್ರಗಳು ಅದರ ಪರಿಣಾಮಗಳೇ ಆಗಿವೆ. ಆದರೂ ನಿರೀಕ್ಷಿತ ತಿರುಗೇಟು ನೀಡಬಹುದಿತ್ತು ಎಂದು ಹೇಳಿದೆ ಎನ್ನಲಾಗಿದೆ.
ಪುನರಾವರ್ತನೆ ಆಗದಿರಲು ತಾಕೀತುಮುಂಬರುವ ದಿನಗಳಲ್ಲಿ ಬಿಬಿಎಂಪಿ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಅಲ್ಲಿಯೂ ಇದು ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಈಗಿನಿಂದಲೇ ಅದಕ್ಕೆ ಸಜ್ಜಾಗಬೇಕು. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅಷ್ಟೇ ಅಲ್ಲ, ಸರಕಾರದಲ್ಲಿ ಈ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.