Advertisement

ಮೋದಿ ಅಲೆಯಿಂದ ಕಾಂಗ್ರೆಸ್‌ಗೆ ಧಕ್ಕೆ ಇಲ್ಲ: ಸತೀಶ್‌ ಜಾರಕಿಹೊಳಿ

10:00 PM Apr 14, 2019 | Lakshmi GovindaRaju |

ತಿ.ನರಸೀಪುರ: ನರೇಂದ್ರ ಮೋದಿ ಅವರ ಅಲೆಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆಯಾಗದು ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

Advertisement

ಚಾ.ನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಯಳಂದೂರಿಗೆ ತೆರಳುತ್ತಿದ್ದ ವೇಳೆ ಆಲಗೂಡು ಗ್ರಾಮದ ಬಳಿ ನಾಯಕ ಸಮುದಾಯ ಹಾಗೂ ಕಾಂಗ್ರೆಸ್‌ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ ಅವರು ಪ್ರಾಮಾಣಿಕರು, ಸಜ್ಜನರು, ಉತ್ಸಾಹಿಗಳು ಆಗಿದ್ದು ದೇಶದ ಕೆಲವೇ ಕೆಲವು ಸಂಸದರಲ್ಲಿ ಉತ್ತಮ ಸಂಸದೀಯ ಪಟುವಾಗಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸಿ ಕ್ಷೇತ್ರದಲ್ಲಿ ಈವರೆಗೂ ಆಗದ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಹೀಗಾಗಿ ಪ್ರಜ್ಞಾವಂತ ಮತದಾರರು ಮತ ನೀಡಿ ಗೆಲ್ಲಿಸುತ್ತಾರೆಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮೋದಿ ಪರ ಅಲೆಯಿದೆ ಎಂಬ ಪ್ರಶ್ನೆಗೆ, ಕಳೆದ ಬಾರಿಗಿಂತ ಈ ಬಾರಿ ಮೋದಿ ಅಲೆ ಕಡಿಮೆಯಿದೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಎದುರಾಗದು. ನಮ್ಮ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಲಿದ್ದು ರಾಹುಲ್‌ ಗಾಂಧಿ ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆಂದರು.

ಲೋಕಸಭಾ ಮಾಜಿ ಸದಸ್ಯ ಕಾಗಲವಾಡಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಎಸ್‌ಸಿ ಬಸವರಾಜು, ಸದಸ್ಯ ಪುಟ್ಟಬಸವಯ್ಯ, ಪಪಂ ಎಸ್‌ಟಿ ಬ್ಲಾಕ್‌ ಅಧ್ಯಕ್ಷ ಆಲಗೂಡು ನಾಗರಾಜು, ಹೊನ್ನನಾಯಕ, ಬ್ಲಾಕ್‌ ಜೆಡಿಎಸ್‌ ಅಧ್ಯಕ್ಷ ತಾಯೂರು ಪ್ರಕಾಶ್‌, ಘಟಕ ಮಹದೇವು,

Advertisement

ಪಿ.ಸ್ವಾಮಿನಾಥ್‌, ಬಿ.ಮರಯ್ಯ, ಹುಣಸೂರು ಬಸವಣ್ಣ, ತಿರುಮಕೂಡಲು ಪಿ.ಪುಟ್ಟರಾಜು, ಮುದ್ದೇಗೌಡ, ಇಂಡವಾಳು ಬಸವರಾಜು, ಲೋಕೇಶ್‌, ಆರ್‌.ಪಿ.ಹುಂಡಿ ನಾಗರಾಜು, ಕೃಷ್ಣ, ಮೇದನಿ ಸಿದ್ದರಾಜು, ಪಪಂ ಮಾಜಿ ಸದಸ್ಯ ರಾಘವೇಂದ್ರ, ಸುಂದರ್‌ ನಾಯಕ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next