Advertisement

ರಕ್ತ ಪಾತಕ್ಕೆ ಅವಕಾಶ ಕೊಡಬಾರದು: ಎಚ್.ಡಿ.ಕುಮಾರಸ್ವಾಮಿ ಕಳವಳ

02:36 PM Feb 09, 2022 | Team Udayavani |

ಬೆಂಗಳೂರು : ಹಿಜಾಬ್ ವಿವಾದವನ್ನು ಆರಂಭದಲ್ಲೇ ಸರಕಾರ ಬಗೆಹರಿಸಬಹುದಿತ್ತು. ಈಗ ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರಂಭದಲ್ಲೇ ಸರ್ಕಾರ ಈ ವಿವಾದವನ್ನ ಬಗೆಹರಿಸಬಹುದಿತ್ತು.ಅಂತಹ ಕೆಲಸವನ್ನ ಸಮರ್ಪಕವಾಗಿ ಮಾಡಲಿಲ್ಲ.ಈ ವಿಚಾರ ನ್ಯಾಯಾಲಯದಲ್ಲಿದೆ ಆದರೆ, ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.

ನಮ್ಮಲ್ಲಿ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬುದಿಲ್ಲ.ಎಲ್ಲರೂ ಒಂದೇ, ಇಡೀ ದೇಶ ಒಂದೆ ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ಮೂಡಿಸಬಾರದು ಎಂದು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ಈ ರೀತಿ ಘಟನೆಗಳು ನಡೆಯಬಾರದು. ಯಾವುದೋ ಕೆಲವು ಸಂಘಟನೆಗಳಿಂದ ಪ್ರೇರೇಪಿತರಾಗಿ ಈ ರೀತಿ ಆಗ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಶಾಂತಿ ಕಾಪಾಡಬೇಕು. ಎಲ್ಲಾ ಯುವಕ, ಯುವತಿಯರಿಗೆ ಮನವಿ ಮಾಡುತ್ತೇನೆ.ವಾದ ವಿವಾದ ಪ್ರತಿವಾದ ಮುಂದುವರೆದಿದೆ. ಜನತೆ, ಯುವಕರಿಗೆ ಮತ್ತು ಪೋಷಕರಿಗೆ ವೈಷಮ್ಯಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದಕ್ಕೆ ಎಲ್ಲರು ಬದ್ಧರಾಗಿರಬೇಕು. ರಕ್ತ ಪಾತಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡುತ್ತೇನೆ.ನಾಯಕರು ಕೂಡ ಸಮಾಜದಲ್ಲಿ ಅಶಾಂತಿಗೆ ಅವಕಾಶ ಕೊಡಬಾರದು. ಶಾಂತಿಯ ವಾತಾವರಣ ತರಲು ಮನವಿ ಮಾಡುತ್ತೇನೆ. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಣ ತರುವ ಕೆಲಸ ಆಗಬಾರದು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇವೆಲ್ಲಾ ನಡೀತಿವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ರೀತಿ ವಾತಾವರಣ ಸೃಷ್ಟಿ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದರು.

Advertisement

ರಾಜ್ಯದಲ್ಲಿ ಚರ್ಚೆ ಮಾಡೋಕೆ ಹಲವಾರು ವಿಷಯಗಳಿವೆ.ನಾಡಿನ ಅಭಿವೃದ್ಧಿಗಾಗಿ ಚಿಂತನೆ ಮಾಡಬೇಕು. ಈ ರೀತಿ ಗಲಭೆ ಸೃಷ್ಟಿಸುವ ಅವಶ್ಯಕತೆ ಇಲ್ಲ.ಇಲ್ಲಿ ಇದ್ದವರು ಎಲ್ಲರೂ ಭಾರತೀಯರು, ಅಭಿಮಾನ ಇರುವವರೇ. ಅಭಿಮಾನ ಇಲ್ಲದೆ ಇರುವವರೆ ದೇಶ ವಿಭಜನೆ ಆದಾಗಲೇ ಹೊರಟು ಹೋಗಿದ್ದಾರೆ.ಈ ವಿಚಾರ ಕರಾವಳಿಯ ಜತೆಗೆ ಬೇರೆ ಜಿಲ್ಲೆಗಳಿಗೂ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next