Advertisement

ಯಕ್ಷಗಾನ ನಡೆದು ಬಂದ ದಾರಿಯನ್ನು ನೆನಪಿಸಿದ ಸಮ್ಮೇಳನ

06:00 AM May 04, 2018 | Team Udayavani |

ಅಪರೂಪಕ್ಕೆ ಅಲ್ಲಲ್ಲಿ ಯಕ್ಷಗಾನ ಸಮ್ಮೇಳನಗಳೂ ನಡೆಯುತ್ತವೆ. ಆದರೆ ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಯುವುದು ವಿರಳ. ಯಕ್ಷಗಾನ ಬೆಳೆದು ಬಂದ ದಾರಿಯ ಒಂದು ಅವಲೋಕನ ಸಾಧ್ಯವಾಗಿದ್ದು 12 ವರ್ಷಗಳಿಂದ ನಡೆಯುತ್ತಿರುವ, ಈ ಬಾರಿ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಹಾಗೂ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ 13ನೇ ಅಖೀಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದಲ್ಲಿ.ಸಮ್ಮೇಳನವನ್ನು ಬಡಗು, ತೆಂಕು ಸಹಿತ ರಾಜ್ಯಾದ್ಯಂತ ಇರುವ ಬೇರೆ ಬೇರೆ ಪ್ರಕಾರಗಳ ಯಕ್ಷಗಾನವನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಯಕ್ಷಗಾನದ ಕುರಿತಂತೆ ವಿಶೇಷ ಉಪನ್ಯಾಸ, ಗೋಷ್ಠಿಗಳು, ಚರ್ಚೆ, ಸಂವಾದ, ತಿಟ್ಟುಮಟ್ಟುಗಳ ಭೇದವಿಲ್ಲದೆ ರಾಜ್ಯದ ವಿವಿಧ ಭಾಗಗಳ ಯಕ್ಷಗಾನ ಪ್ರದರ್ಶನ ನಡೆಯಿತು. 

Advertisement

ಯಕ್ಷಗಾನ ಸಾಹಿತ್ಯಕ್ಕೂ ಮಾನ್ಯತೆ ದೊರೆಯಬೇಕು, ಯಕ್ಷಗಾನ ಸಾಹಿತ್ಯದ ಶ್ರೀಮಂತಿಕೆಯತ್ತ ಕನ್ನಡ ಸಾರಸ್ವತ ಲೋಕ ಗಮನ ಹರಿಸಬೇಕೆಂದು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು ಸಂಘಟಕ ಎಸ್‌.ಎನ್‌. ಪಂಜಾಜೆ ಅವರು. 

ಸಮ್ಮೇಳನವನ್ನು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರಾಗಿ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರು ಯಕ್ಷಗಾನದ ಅವಲೋಕನ ಮಾಡಿದರು. ಯಕ್ಷಗಾನದ ಗೋಷ್ಠಿ ಡಾ| ರಾಘವ ನಂಬಿಯಾರರ ಅಧ್ಯಕ್ಷತೆಯಲ್ಲಿ ನಡೆಯಿತು. 

ವೈವಿಧ್ಯ
ಬಡಗುತಿಟ್ಟಿನ ಯಕ್ಷಗಾನ ಕಂಸವಧೆ , ಸಣ್ಣಾಟ ಪ್ರದರ್ಶನ ,ದೀವಟಿಗೆ ಬೆಳಕಿನಲ್ಲಿ, ಪುಂಗಿ ಶ್ರುತಿಯಲ್ಲಿ ಯಕ್ಷಗಾನ ಬಯಲಾಟ ಪೂರ್ವರಂಗ ಪ್ರದರ್ಶನ, ತೊಗಲುಗೊಂಬೆ ಪ್ರದರ್ಶನ, ಬಡಗುತಿಟ್ಟಿನ ಯಕ್ಷಗಾನ ರತಿ ಕಲ್ಯಾಣದ ಪ್ರದರ್ಶನ ಗರುಡ ಗರ್ವಭಂಗ ತಾಳಮದ್ದಳೆ, ಸುದರ್ಶನ ವಿಜಯ ಯಕ್ಷಗಾನ, ದಾಶರಥಿ ದರ್ಶನ, ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ , ಧಾರವಾಡದ ಕಲಾವಿದರಿಂದ ವಾಲಿ ಸುಗ್ರೀವರ ಕಾಳಗ ಯಕ್ಷಗಾನ ಬಯಲಾಟ , ಬಯಲಾಟ, ಯಕ್ಷಗಾನ ಮತ್ತು ನಾಟಕ, ಪಾರಿಜಾತ ಮತ್ತು ಯಕ್ಷಗಾನ ತೆಂಕುತಿಟ್ಟಿನ ಸುದರ್ಶನ ವಿಜಯ, ಮೂಡಲಪಾಯ ಪ್ರಾತ್ಯಕ್ಷಿಕೆ, ಯಕ್ಷಗಾನ ಪಾರಿಜಾತ, ದೊಡ್ಡಾಟ ಪ್ರದರ್ಶನ, ಬಡಗು ಯಕ್ಷಗಾನ ಜಾಂಬವತಿ ಕಲ್ಯಾಣ ನಡೆಯಿತು. 

 ತಿಟ್ಟುಗಳ ರಂಗು
ಸಾಗರದ ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕಂಸವಧೆ ಬಡಗುತಿಟ್ಟು ಯಕ್ಷಗಾನ, ಬಸವೇಶ್ವರ ಸಣ್ಣಾಟ ಸಂಘ ಗೋಕಾಕ ಇವರಿಂದ ಶಿವಶಕ್ತಿ ಸಣ್ಣಾಟ ಪ್ರದರ್ಶನ, ಉಡುಪಿ ಚೇರ್ಕಾಡಿಯ ಕಲಾಶ್ರೀ ಬಾಲಕಿಯರ ಯಕ್ಷಗಾನ ಮೇಳದಿಂದ ದೀವಟಿಗೆ ಬೆಳಕಿನಲ್ಲಿ ಪುಂಗಿ ಶ್ರುತಿಯಲ್ಲಿ ಯಕ್ಷಗಾನ ಬಯಲಾಟ ಪೂರ್ವರಂಗ ಪ್ರದರ್ಶನ, ಮೈಸೂರಿನ ನಂಜನಗೂಡಿನ ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಗೊಂಬೆ ಮೇಳದವರಿಂದ ಸತ್ಯ ಹರಿಶ್ಚಂದ್ರ ಸೂತ್ರದ ಗೊಂಬೆಯಾಟ ಪ್ರದರ್ಶನ, ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದವರಿಂದ ಬಡಗುತಿಟ್ಟಿನ ಯಕ್ಷಗಾನ ರತಿ ಕಲ್ಯಾಣದ ಪ್ರದರ್ಶನ ನಡೆಯಿತು. (ಮುಂದಿನ ವಾರಕ್ಕೆ)

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next