Advertisement

ಮಠಗಳ ಸ್ವಾಧೀನತೆಯ ವಿಚಾರ: “ಬೆಂಕಿಗೆ ಕೈ ಹಾಕಿದಂತೆ’

08:15 AM Feb 08, 2018 | Team Udayavani |

ಉಡುಪಿ: ಸರಕಾರಕ್ಕೆ ತನ್ನದೇ ಆದ ಅನೇಕ ಕಾರ್ಯಗಳಿವೆ. ಅದನ್ನು ಬಿಟ್ಟು ಧಾರ್ಮಿಕ ಸಂಸ್ಥೆಗಳಿಗೆ ಕೈ ಹಾಕಬಾರದು. ಅದನ್ನು ಆಯಾ ಧರ್ಮಾಧಿಕಾರಿಗಳೇ ನೋಡಿಕೊಳ್ಳುತ್ತಾರೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

Advertisement

ಮಠಗಳನ್ನು ಸರಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತವೆ ಎಂಬ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸರಕಾರ ನಡೆಸಲಾಗದೆ ಅನೇಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸಿದ ಉದಾಹರಣೆಗಳಿವೆ. ಧರ್ಮ ಸಂಸ್ಥೆಗಳು ಧರ್ಮ ಪ್ರಚಾರಕ್ಕೆ, ಭಕ್ತರಿಗೆ ಮಾರ್ಗದರ್ಶನ ನೀಡಲು ಹೊರತು ದುಡ್ಡು ಮಾಡುವುದಕ್ಕಲ್ಲ. ಸರಕಾರ ಮಠ, ಮಂದಿರ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಬೆಂಕಿಗೆ ಕೈ ಹಾಕಿದಂತೆ. ಸಾರ್ವಜನಿಕರು ಇದನ್ನು ಪ್ರಬಲ ವಾಗಿ ವಿರೋಧಿಸುತ್ತಾರೆ. ಹಿಂದೆ ಕೃಷ್ಣ ಮಠದ ವಿಷಯದಲ್ಲಿ ಕೈ ಹಾಕಿ ಸುಟ್ಟು ಕೊಂಡಿ ¨ªಾರೆ. ಕೋರ್ಟ್‌ ಕೂಡ ಮಠದ ಪರವಾಗಿ ತೀರ್ಪು ನೀಡಿದೆ ಎಂಬುದನ್ನು ಮರೆಯಬಾರದು. ಸರಕಾರ ತಪ್ಪು ಹೆಜ್ಜೆ ಇಡಬಾರದು. ಸರಕಾರ ದ್ವೇಷದ ರಾಜಕಾರಣ ಮಾಡುವುದು ಸಲ್ಲದು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next