Advertisement

ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ

02:56 PM Nov 29, 2020 | Adarsha |

ಮುಳಗುಂದ: ರಾಜ್ಯದಲ್ಲಿ ತಲೆದೋರಿರುವ ಸಂಕಷ್ಟದ ಸಮಯದಲ್ಲಿ ಕ್ಯಾಬಿನೆಟ್‌ ಮಂತ್ರಿಗಳು ಗುಂಪುಗೂಡಿ ಸಭೆ ಮಾಡಿ, ಕ್ಯಾಬಿನೆಟ್‌ ಸಭೆಯನ್ನೇ ಬಿಟ್ಟು ಹೋಗುವುದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವುದು ಹಾಗೂ ಅಂತಃಕಲಹದಿಂದ ಆಡಳಿತ ಯಂತ್ರ ಸಂಪೂರ್ಣ ನಿಂತು ಹೋಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಶಾಸಕ ಎಚ್‌.ಕೆ. ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ, ಮಂತ್ರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದೇ ನಿತ್ಯ ಪ್ರಯತ್ನವಾಗಿದೆ. ಹಾಗಾಗಿ, ರಾಜ್ಯ ಎಲ್ಲ ರೀತಿಯಿಂದ ಸಂಕಷ್ಟಕ್ಕೆ ಬಂದು ನಿಂತಿದೆ. ಅಭಿವೃದ್ಧಿ ಕೆಲಸಗಳುನಿಷ್ಕ್ರಿಯವಾಗಿವೆ.

ಇದನ್ನೂ ಓದಿ:ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನಾ ಸೇರ್ಪಡೆ ಅಧಿಕೃತ !

ಗ್ರಾಮಾಂತರ ಭಾಗದಲ್ಲಿ ವರ್ಷಗಟ್ಟಲೇ ಮನೆ ಕಟ್ಟಲು ಸಹಾಯಧನ ಸಿಗುತ್ತಿಲ್ಲ. ವೃದ್ಧರು, ವಿಧವೆಯರು ಹಾಗೂ ಇತರೆ ಕಲಾವಿದರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಬಂದ್‌ ಆಗಿದೆ. ಇಂದು ಕೆಟ್ಟ ಪರಿಸ್ಥಿತಿ ಎದುರಾಗಿದೆ. ಮುಂಬರುವ ಡಿ.7ರ ವಿಧಾನಸಭಾ ಅಧಿ ವೇಶನದಲ್ಲಿ ಎಲ್ಲ ವಿಷಯಗಳನ್ನು ಕೈಗೆತ್ತಿಕೊಳಲಾಗುವುದು ಎಂದರು. ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ,ಹನಮಂತಪ್ಪ ಪೂಜಾರ, ಶರಣಬಸನಗೌಡ ಪಾಟೀಲ, ಸಿದ್ದು ಪಾಟೀಲ, ಅಪ್ಪಣ್ಣ ಇನಾಮತಿ ಇತರರು ಉಪಸ್ಥಿತರಿದ್ದರು.

ನೀಲಗುಂದದಲ್ಲಿ ಬಸ್‌ ನಿಲ್ದಾಣ ಉದ್ಘಾಟನೆ

Advertisement

ಮುಳಗುಂದ: ನೀಲಗುಂದ ಗ್ರಾಮದ ಗುದ್ನೇಶ್ವರ ಮಠದ ಬಳಿ ನೂತನವಾಗಿ ನಿರ್ಮಾಣವಾದ ಬಸ್‌ ನಿಲ್ದಾಣವನ್ನು ಎಪಿಎಂಸಿ ಸದಸ್ಯ ಅಪ್ಪಣ್ಣ ಇನಾಮತಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ನೂತನವಾಗಿ ಗ್ರಾಂಥಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಹೊಸಳ್ಳಿ ಗ್ರಾಮದಲ್ಲಿ ಜಲ್‌ ಜೀವನ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಕಾಮಗಾರಿಗೆ ಶಾಸಕ ಎಚ್‌. ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು, ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಹನಮಂತಪ್ಪ ಪೂಜಾರ, ಸಿದ್ದು ಪಾಟೀಲ, ತಾಪಂ ಇಒ ಎಚ್‌. ಎಸ್‌.ಜಿನಗಿ, ವಿದ್ಯಾಧರ ದೊಡ್ಡಮನಿ, ನವೀನ ಬಂಗಾರಿ, ಜಿ.ಆರ್‌.ಕತ್ತಿ, ಕುಬೇರಡ್ಡಿ ಬಂಗಾರಿ, ಮುತ್ತಪ್ಪ ದೊಡ್ಡಮನಿ, ಪ್ರವೀಣ ಬಂಗಾರಿ, ಸುನೀಲ ಬಂಗಾರಿ, ಎಫ್‌.ವೈ.ಹಿರೇಮನಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next