Advertisement
ಅಪೂರ್ಣ ಕಾಮಗಾರಿಗೆ ಟೋಲ್ ಪಡೆಯುವುದನ್ನು ಜನರು ವಿರೋಧಿಸಿದಾಗ ಉಸ್ತುವಾರಿ ಮಂತ್ರಿ, ಶಾಸಕರು ಮತ್ತು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಹಿತ ಪ್ರಮುಖರ ಸಭೆ ಕರೆದು, ಕಾಮಗಾರಿಯ ಪೂರ್ಣತೆ ಬಗ್ಗೆ ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಟಿ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಫೆ. 8ರಂದು ವರದಿ ಸಲ್ಲಿಸಿದಾಗ ವರದಿಯಲ್ಲಿ ಕುಂದಾಪುರದಿಂದ ಹೆಜಮಾಡಿ ವರೆಗೆ 65 ಕಿ. ಮೀ. ಉದ್ದದ ರಸ್ತೆ ನಿರ್ಮಾಣವಾಗಬೇಕಾಗಿದ್ದು, ಅದರಲ್ಲಿ ಮುಖ್ಯವಾಗಿ ಕುಂದಾಪುರ ಮೇಲ್ಸೆತುವೆ ಹಾಗೂ 4 ಲೇನ್‌ರಸ್ತೆಯ 2.26 ಕಿ.ಮೀ. ಮತ್ತು ಉಡುಪಿ ಮತ್ತು ಕರಾವಳಿ ಜಂಕ್ಷನ್ ಬಳಿಯ 10 ಕಿ. ಮೀ. ರಸ್ತೆ, ಪಡುಬಿದ್ರಿ ಭಾಗದಲ್ಲಿ 3.2 ಕಿ. ಮೀ. ರಸ್ತೆ ಬಾಕಿಯಿದ್ದು ಒಟ್ಟು ಚತುಷ್ಪಥ ರಸ್ತೆಯಲ್ಲಿ 6.5 ಕಿ. ಮೀ. ಹೆಚ್ಚಿಗೆ ಕಾಮಗಾರಿ ಬಾಕಿ ಉಳಿದಿದೆ ಎಂದರು.
ಸರ್ವಿಸ್ ರಸ್ತೆಯ ಪ್ರತಿ ಒಟ್ಟು 31 ಕಿ.ಮೀ. ರಸ್ತೆ ಅಗಲವಾಗಬೇಕಾಗಿದ್ದು, ಕೇವಲ 14 ಕಿ.ಮೀ. ರಸ್ತೆ ಮಾತ್ರ ಆಗಿದೆ. ಅಂದರೆ ಕೇವಲ ಶೇ. 50ರಷ್ಟು ಸರ್ವಿಸ್ ರಸ್ತೆಯಾಗಿದೆ. ಸೇತುವೆ ಪೈಕಿ 6 ಹೊಸ ಸೇತುವೆ ನಿರ್ಮಾಣವಾಗಬೇಕಿದ್ದು, ಈ ಪೈಕಿ 5 ಹಳೆಯ ಸೇತುವೆ ಉಳಿಸಿಕೊಂಡು ಕಾರ್ಯಾರಂಭ ಮಾಡಲಾಗಿದೆ. ಸಾಸ್ತಾನ ಟೋಲ್ ಗೇಟಿನ ಬಳಿ ಸರ್ವಿಸ್ ರಸ್ತೆಯನ್ನೂ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಅಪೂರ್ಣ ಕಾಮಗಾರಿ ವರದಿಯನ್ನು ಕೇಂದ್ರಕ್ಕೆ ಮತ್ತು ರಾಜ್ಯಕ್ಕೆ ವರದಿ ಸಲ್ಲಿಸುವ ಬದಲು ಜಿಲ್ಲಾಧಿಕಾರಿ ಗುತ್ತಿಗೆದಾರರಿಗೆ ಏಕೆ ಣಿದಿದ್ದಾರೆ ಎಂದು ಅರ್ಥ ವಾಗುತ್ತಿಲ್ಲ. ನಾನು ಈ ವಿಷಯವನ್ನು ಸದನದಲ್ಲಿ ಪ್ರಸ್ತಾವಿಸಿದ್ದೇನೆ. ಲೋಕೋಪಯೋಗಿ ಪ್ರ.ಕಾರ್ಯದರ್ಶಿ ತತ್‌ಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ