Advertisement

ದೈವ ಬಲ ಇರುವವರೆಗೆ ಸಮ್ಮಿಶ್ರ ಸರ್ಕಾರಕ್ಕಿಲ್ಲ ಧಕ್ಕೆ: ದೇವೇಗೌಡ

06:00 AM Sep 15, 2018 | Team Udayavani |

ಶಿವಮೊಗ್ಗ: “ಗುರು ಹಾಗೂ ದೈವ ಬಲ ಇರುವವರೆಗೆ ರಾಜ್ಯದಲ್ಲಿರುವ ಜೆಡಿಎಸ್‌, ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ಗಾಡಿಕೊಪ್ಪದಲ್ಲಿರುವ ಲಗನಾ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಲೆನಾಡು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ರಜತ ಮಹೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ, ಮುಹೂರ್ತ ಫಿಕ್ಸ್‌ ಮಾಡಿದರೂ ನಮ್ಮ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ದೇಶದ ಇತಿಹಾಸದಲ್ಲೇ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 37 ಸೀಟುಗಳನ್ನು ಗೆದ್ದು ಮುಖ್ಯಮಂತ್ರಿಯಾಗಿರುವುದೇ ವಿಶೇಷ. ಇದರ ಹಿಂದೆ ಒಂದು ಕಾರಣ ಹಾಗೂ ಶಕ್ತಿ ಇರಲೇಬೇಕಲ್ಲ. ಆ ಶಕ್ತಿಯೇ ನಮ್ಮನ್ನು ಕಾಪಾಡುತ್ತದೆ ಎಂಬ ಭರವಸೆ ನಮಗಿದೆ ಎಂದರು.

ಸಮ್ಮಿಶ್ರ ಸರ್ಕಾರ ಬೀಳಿಸಿದರೆ ದೈವಶಕ್ತಿ
ವಿರೋಧಿಸಿದಂತೆ: ನಿರ್ಮಲಾನಂದ ಶ್ರೀ

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, “ಪ್ರಾಮಾಣಿಕವಾಗಿ ಆಡಳಿತ ನೀಡುತ್ತಿರುವ ದೇವೇಗೌಡ ಅವರ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಎಂದಿಗೂ ಇರುತ್ತದೆ. ಅಲ್ಪ ಸೀಟುಗಳನ್ನು ಪಡೆದು ರಾಜ್ಯದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿಯಬೇಕಾದರೆ ಅದಕ್ಕೆ ದೈವಿ ಶಕ್ತಿಯೇ ಕಾರಣ. ಒಂದು ವೇಳೆ ಇದನ್ನು ವಿರೋಧಿಸಿ ಬೇರೆಯವರು ಅಧಿಕಾರಕ್ಕೆ ಬಂದರೂ ಅದು ದೈವಶಕ್ತಿಯನ್ನು ವಿರೋಧಿ ಸಿದಂತಾಗುತ್ತದೆ. ದೇವೇಗೌಡರು ಚಿಕ್ಕವರಿದ್ದಾಗ “ಈ ಹುಡುಗ ಚಕ್ರವರ್ತಿಯಾಗುತ್ತಾನೆ’ ಎಂದು ಬುಡಬುಡಿಕೆಯೊಬ್ಬರು ಹೇಳಿದ್ದರು. ಅದು ನಿಜವಾಗಿದೆ ಎಂದರು. ಕೈಗಾರೀಕರಣದ ಮಧ್ಯೆ ಕೃಷಿ ವಲಯ ನಿರ್ಲಕ್ಷéಕ್ಕೀಡಾಗಿದೆ. ಈ ಹಿಂದೆ ಕೃಷಿ ಚಟುವಟಿಕೆಯಿಂದಲೇ ಶೇ.50ರಷ್ಟು ಜಿಡಿಪಿ ಬರುತ್ತಿತ್ತು. 2018ರಲ್ಲಿ ಇದರ ಪ್ರಮಾಣ 15.5ಕ್ಕೆ ಕುಸಿದಿದೆ. ಹೀಗಾಗಿ, ಕೃಷಿಯ ಬಗ್ಗೆ ಕಾಳಜಿ ಇರುವ, ಅದನ್ನು ಪ್ರೀತಿಸುವ ವ್ಯಕ್ತಿ ಅ ಧಿಕಾರಕ್ಕೆ ಬಂದರೆ ಖಂಡಿತ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತದೆ ಎಂದರು.

ಸರ್ಕಾರ ಬೀಳಿಸೋ ವಿಷಯ ಅಷ್ಟೊಂದು ಪ್ರಾಮುಖ್ಯವೇ?
ಶಿವಮೊಗ್ಗ: “
ನಿಮಗೆ ಸರಕಾರ ಬೀಳಲಿದೆ ಎಂಬುದು ಪ್ರಾಮುಖ್ಯತೆ ಪಡೆದಿರುವ ವಿಷಯವೇ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮಾಧ್ಯಮಗಳಿಗೆ ಪ್ರಶ್ನಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರ ಮೇಲೆ ನನಗೆ ಗೌರವವಿದೆ. ಆದರೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಗಿಂತ ಸರಕಾರ ಉರುಳಿಸುವ ಕುರಿತೇ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈಸ್‌ ಇಟ್‌ ನೆಸಸರಿ ಫಾರ್‌ ಯು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

Advertisement

ರೈತರ ಸಾಲಮನ್ನಾ ಮಾಡಿದ್ದಾರೆ, ಬಡವರ-ಜನಪರ ಯೋಜನೆಗಳನ್ನು ತಂದಿದ್ದಾರೆ. ಈ ಬಗ್ಗೆ ನೀವು ಹೇಳುತ್ತಿಲ್ಲ. ಮೂರು ತಿಂಗಳಿಂದ ನಾನೂ ಗಮನಿಸುತ್ತಿದ್ದೇನೆ. ನೀವು ಸರಕಾರ ಯಾವಾಗ ಬೀಳುತ್ತೆ ಎಂದು ಲೆಕ್ಕಾಚಾರ ಹಾಕುತ್ತಿದ್ದೀರಿ ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next