Advertisement

ಅಧಿವೇಶನ ಗದ್ದಲದಲ್ಲಿ ಅಂತ್ಯಗೊಳ್ಳಲು ಸಿಎಂ ಕಾರಣ

08:15 AM Feb 24, 2018 | Team Udayavani |

ಬೆಂಗಳೂರು: ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವಾಗ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಳ್ಳಲು
ಸಾಧ್ಯವಾಗದೆ ಮುಖ್ಯಮಂತ್ರಿಗಳು ರಾಜಕೀಯ ಭಾಷಣ ಮಾಡಿದ್ದೇ 14ನೇ ವಿಧಾನಸಭೆಯ ಕೊನೆಯ ಅಧಿವೇಶನ ಗದ್ದಲದಲ್ಲಿ ಅಂತ್ಯಗೊಳ್ಳಲು ಕಾರಣವಾಗಿದ್ದು, ಈ ಬೆಳವಣಿಗೆಗೆ ಮುಖ್ಯಮಂತ್ರಿಗಳೇ ನೇರ ಹೊಣೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸುವಾಗ ಗುರು ವಾರವೂ ಕೇಂದ್ರ ಸರ್ಕಾರದ ವಿರುದಟಛಿ ಅನಗತ್ಯ ಆರೋಪ ಮಾಡುವ ಮೂಲಕ ವಿಷಯಾಂತರ ಮಾಡಿದ್ದರು. ಆದರೂ ಶುಕ್ರವಾರ ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವಾಗ ನಾವು ತಾಳ್ಮೆಯಿಂದಲೇ ಇದ್ದೆವು. ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಆರಂಭವಾಗಿ ಒಂದು ಗಂಟೆಯಾದರೂ ಉತ್ತರ ಸಿಗಲಿಲ್ಲ. ಬದಲಾಗಿ
ಮತ್ತೆ ಕಾಂಗ್ರೆಸ್‌ನ ಕೆ.ಎನ್‌.ರಾಜಣ್ಣ ಮತ್ತಿತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಕೇಂದ್ರ ಸರ್ಕಾರದ ವಿರುದಟಛಿ ಆರೋಪ 
ಮುಂದುವರಿಸಿದರು. ಇದರಿಂದಾಗಿ ಮುಖ್ಯಮಂತ್ರಿಗಳಿಗೆ ಉತ್ತರ ನೀಡಲು ನೈತಿಕತೆ ಇಲ್ಲದೆ ರಾಜಕೀಯ ಮಾಡುವ ಉದ್ದೇಶವಿದೆ ಎಂಬುದು ಸ್ಪಷ್ಟವಾಗಿ ಬಿಜೆಪಿ ಧರಣಿ ನಡೆಸಬೇಕಾಯಿತು ಎಂದು ಹೇಳಿದರು.

ಇದು 14ನೇ ವಿಧಾನಸಭೆಯ ಕೊನೆಯ ಅಧಿವೇಶನ. ಹೀಗಾಗಿ ಮುಖ್ಯಮಂತ್ರಿಗಳು ಸದನದ ಗೌರವ ಉಳಿಸಲು ಪ್ರಯತ್ನಿಸಬೇಕಿತ್ತು. ಆದರ ಬದಲಾಗಿ ತಮ್ಮ ನಡವಳಿಕೆಯಿಂದ ಸದನದ ಗೌರವಕ್ಕೆ ಧಕ್ಕೆ ತಂದರು. ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವ ಬದಲು ಪ್ರಧಾನಿ ಮೋದಿ ವಿರುದಟಛಿ ಟೀಕೆ, ಕೇಂದ್ರ ಸರ್ಕಾರವನ್ನು 90 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಆರೋಪಿಸುವುದರಲ್ಲೇ ಕಾಲ ಕಳೆದರು. ಆ ಮೂಲಕ ಸದನದ ನಡಾವಳಿ ದಾರಿತಪ್ಪಲು ಅವಕಾಶ ಮಾಡಿಕೊಟ್ಟರು ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next