Advertisement
ರವಿವಾರ ವಿಶ್ವಾದಾದ್ಯಂತ ಕೈಸ್ತರು ಆಚರಿಸುತ್ತಿರುವ “ಗರಿಗಳ ರವಿವಾರ (ಪಾಮ್ ಸಂಡೇ)’ಯ ಅಂಗವಾಗಿ ನಗರದ ಮಾçದೆ ದೇವುಸ್ ಚರ್ಚ್‌ನಲ್ಲಿ ಅವರು ಬೈಬಲ್ ಸಂದೇಶ ನೀಡಿದರು.
ಹಿಂಸೆಯಿಂದ ಹೊರಬರಲು ಒಂದೇ ಮಾರ್ಗವೆಂದರೆ ಅದು ಶಿಸ್ತಿನ ಬದುಕು. ಆಧ್ಯಾತ್ಮಿಕತೆಗೆ ಕರೆದೊಯ್ಯುವ ಪ್ರಾರ್ಥನೆ, ಉಪವಾಸ, ಕಷ್ಟ-ನೋವುಗಳ ನಡುವೆ ತೋರಬೇಕಾದ ತಾಳ್ಮೆ ಸಹನೆಗಳಷ್ಟೇ ಹಿಂಸೆಯನ್ನು ಹತ್ತಿಕ್ಕಲು ಸಾಧ್ಯವೆಂದು ತಿಳಿಸಿದವರು ಕ್ರಿಸ್ತರು. ಬದುಕಿನಲ್ಲಿ ಕಷ್ಟ ಮತ್ತು ನಿರಾಸೆಯಾದಾಗ ಮಾತ್ರ ಯೇಸುಕ್ರಿಸ್ತರನ್ನು ನೆನೆಯುವುದು ಆಗಬಾರದು. ಯೇಸು ಕ್ರಿಸ್ತರು ಪುನರುತ್ಥಾನರಾದಂತೆ ನಾವೂ ಒಂದು ದಿನ ಪುನರುತ್ಥಾನ ಹೊಂದುವೆವು ಎಂಬುದರ ಕುರಿತು ವಿಶ್ವಾಸವಿರಿಸಬೇಕು ಎಂದು ವಂ| ಸಂತೋಷ್ ಹೇಳಿದರು.ಪ್ರಧಾನ ಧರ್ಮಗುರು ವಂ| ಆಲೆøàಡ್ ಜಾನ್ ಪಿಂಟೋ ಬಲಿಪೂಜೆಯ ನೇತೃತ್ವ ವಹಿಸಿದ್ದರು. ವಂ| ವಲೇರಿಯನ್ ಮಿತ್ತೂರು, ವಂ| ಮ್ಯಾಕ್ಸಿಮ್ ಡಿ’ಸೋಜಾ ಬಲಿಪೂಜೆಯಲ್ಲಿ ಸಹಕರಿಸಿದರು.
Related Articles
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡಾ ಅವರು ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿದರು. ಸೆವಕ್ ಕೊಂಕಣಿ ಪತ್ರಿಕೆಯ ಸಂಪಾದಕ ವಂ| ಡೆರಿಕ್ ಸಂದೇಶ ನೀಡಿದರು.
Advertisement
ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡಿಸ್ ದಿವ್ಯ ಬಲಿಪೂಜೆ ನೆರವೇ ರಿಸಿ ಸಂದೇಶ ನೀಡಿದರು.
ಆಯಾ ಚರ್ಚ್‌ಗಳಲ್ಲಿ ದಿವ್ಯ ಪೂಜೆಯ ಮೊದಲು ಶುದ್ಧೀಕರಿಸಿದ ತಾಳೆಗರಿಗಳನ್ನು ಭಕ್ತರಿಗೆ ಹಂಚಲಾಯಿತು.
ಬಳಿಕ ಭಕ್ತಿ ಮೆರವಣಿಗೆ ಮೂಲಕ ಭಕ್ತರು ಚರ್ಚ್‌ಗೆ ಆಗಮಿಸಿ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್‌ಗಳ ಪಾಲನ ಸಮಿತಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಪಾಲನ ಸಮಿತಿಯ ಸದಸ್ಯರು, ವಾಳೆ ಗುರಿಕಾರರು, ಚರ್ಚ್ ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ಗಾಯನ ಮಂಡಳಿಯವರು ಸಹಕರಿಸಿದರು.
ದಿನದ ಸಂಕೇತಗರಿಗಳ ರವಿವಾರ ಪಿತನ ಚಿತ್ತಕ್ಕೆ ವಿಧೇಯ ರಾದ ಯೇಸು, ನಿತ್ಯಜೀವ ಅರಸಲು ಮೃತ್ಯುಪಾಶಕ್ಕೆ ಸಾಗುವ ಪ್ರಯಾಣದ ಸಂಕೇತ. ಈ ರವಿವಾರವನ್ನು ಗರಿಗಳ ರವಿವಾರ ಅಥವಾ ಶ್ರಮ -ಮರಣಗಳ ರವಿವಾರವೆಂದು ಗುರುತಿಸಲಾಗುತ್ತದೆ. ಇದು ಶೋಕ ಸಂಭ್ರಮಗಳ ರವಿವಾರ. ಜನತೆ ಯೇಸುಕ್ರಿಸ್ತರನ್ನು ತಾಳೆಗರಿಗಳಿಂದ ಆತ್ಮೀಯವಾಗಿ ಬರಮಾಡಿಕೊಂಡ ದಿನ ವನ್ನೇ ಕ್ರಿಶ್ಚಿಯನ್ ಸಮುದಾಯದವರು “ಪಾಮ್ ಸಂಡೇ’ ಆಗಿ ಆಚರಿಸುವುದು ಸಂಪ್ರದಾಯವಾಗಿದೆ. ಮುಂದಿನ ರವಿ ವಾರದವರೆಗೆ ಕ್ರೈಸ್ತ ಬಂಧುಗಳು ಪವಿತ್ರ ವಾರ ಆಚರಿಸಲಿದ್ದು, ಎ. 13ರಂದು ಶುಭ ಗುರುವಾರ, ಎ. 14ರಂದು ಶುಭ ಶುಕ್ರವಾರವನ್ನಾಗಿ ಆಚರಿಸಿ ಎ. 16ರಂದು ಈಸ್ಟರ್ ಸಂಡೇ ಹಬ್ಬಕ್ಕಾಗಿ ಕ್ರೈಸ್ತರು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಈ ವಾರವನ್ನು ಯಾತನೆಯ ವಾರ ವೆಂದು ಕರೆಯಲಾಗಿದೆ. ಗರಿಗಳ ರವಿವಾರ ದಂದು ಆರಂಭವಾಗುವ ಯೇಸುವಿನ ಯಾತ್ರೆ ಇಡೀ ವಾರ ಮುಂದುವರಿದು ಶುಕ್ರವಾರದಂದು ಅಂತಿಮಗೊಳ್ಳುತ್ತದೆ. ಕ್ರೈಸ್ತರಿಗೆಲ್ಲ ಪರಿಶುದ್ಧವಾದ, ಬದುಕಿನ ಉತ್ಕೃಷ್ಟ ಭಾವನೆಗಳನ್ನು ಹೊರಹೊಮ್ಮುವ ವಾರ ಈ ಪವಿತ್ರ ವಾರವಾಗಿದೆ. ಸಂತ ಬ್ರಿಜಿಡರ ಚರ್ಚ್‌ನಲ್ಲಿ ಗರಿಗಳ ರವಿವಾರ
ಸುಳ್ಯ : ಸುಳ್ಯದ ಆಯರ್ಲೆಂಡಿನ ಸಂತ ಬ್ರಿಜಿಡ್ ಚರ್ಚ್‌ನಲ್ಲಿ ಗರಿಗಳ ರವಿವಾರವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೈಂಟ್ ಜೋಸೆಫ್ ಶಾಲಾ ಮೆಸ್ ಹಾಲ್‌ನಲ್ಲಿ ಚರ್ಚಿನ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ ಅವರು ಪಾಲನ ಸಮಿತಿಯ ಸಹಯೋಗದಲ್ಲಿ ಹಾಗೂ ಚರ್ಚ್ ಭಕ್ತರ ಸಮ್ಮುಖದಲ್ಲಿ ಗರಿಗಳನ್ನು ಆಶೀರ್ವದಿಸಿ ಭಕ್ತರಿಗೆ ವಿತರಿಸಿದರು. ಆನಂತರ ಗರಿಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ದೇವಾಲಯಕ್ಕೆ ಸಾಗಿ ಅಲ್ಲಿ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಯಾಜಕರು ಗರಿಗಳ ರವಿವಾರದ ಮಹತ್ವದ ಬಗ್ಗೆ ಸವಿವರವಾದ ಬೋಧನೆಯನ್ನು ನೀಡಿದರು.